ಧರ್ಮಸ್ಥಳ: ಕಲ್ಮಂಜ ನಿಡಿಗಲ್ ಸಮೀಪ ಬೈಕ್ ಸ್ಕಿಡ್ ಆಗಿ ಯುವಕ ಸಾವನ್ನಪ್ಪಿದ್ದ ಘಟನೆ ಜ.16 ರಂದು ತಡರಾತ್ರಿ ನಡೆದಿದೆ.
ಧರ್ಮಸ್ಥಳ ಗ್ರಾಮದ ಮುಂಡ್ರುಪಾಡಿ ನಿವಾಸಿ ಮಿಥುನ್ ಕರ್ಕೇರ(23ವ. ) ಮೃತಪಟ್ಟ ಯುವಕ.
ಸಮಾರಂಭದ ಕಾರ್ಯಕ್ರಮಕ್ಕೆಂದು ಮಂಗಳೂರಿನಿಂದ ಬೈಕ್ ನಲ್ಲಿ ಬರುತ್ತಿರುವ ವೇಳೆ ಕಲ್ಮಂಜ ನಿಡಿಗಲ್ ಸಮೀಪ ಬೈಕ್ ಸ್ಕಿಡ್ ಆಗಿ ರೋಡಿಗೆ ಬಿದ್ದು ತಲೆಭಾಗಕ್ಕೆ ಗಂಭೀರ ಗಾಯವಾಗಿದ್ದು, ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರು ಖಾಸಗಿ ಬಸ್ ಮತ್ತು ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಂದೆ ನಾರಾಯಣ ಪೂಜಾರಿ , ತಾಯಿ , ಸಹೋದರಿಯನ್ನು ಅಗಲಿದ್ದಾರೆ.