ಮಡಂತ್ಯಾರು : “ಸತ್ವಯುತವಾದ ಯುವ ಜನಾಂಗದ ಅಭಿವೃದ್ಧಿಗೆ ಈ ಸಂಸ್ಥೆ ಉತ್ಕೃಷ್ಟವಾದ ಕಾರ್ಯ ಮಾಡಿದೆ” ಸಮಾಜಮುಖಿ ಚಿಂತನೆಯನ್ನೊಳಗೊಂಡ ಉತ್ತಮ ನಾಯಕರನ್ನು ಜೇಸಿಐ ಸಮಾಜಕ್ಕೆ ಕೊಡುಗೆ ನೀಡುತ್ತಿದೆ, ದೇಶದ ಅಭಿವೃದ್ಧಿಯಲ್ಲಿ ಎಲ್ಲಾ ಕೆಲಸಗಳನ್ನು ಸರ್ಕಾರದಿಂದಲೇ ನಿರೀಕ್ಷಿಸುವುದು ಸಾಧ್ಯವಿಲ್ಲ. ಸಂಘಸಂಸ್ಥೆಗಳು ನೆರವಿಗೆ ನಿಂತು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವುದರಿಂದ ದೇಶದ ಅಭಿವೃದ್ಧಿ ತಾನಾಗಿಯೇ ಸಾಗುತ್ತದೆ ಎಂದು ಜೆಸಿಐ ಐಪಿಪಿಪಿ ಕಾರ್ತಿಕೆಯ ಮದ್ಯಸ್ತ ನಿಕಟ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರು ಹೇಳಿದರು.
ಅವರು ಮಡಂತ್ಯಾರಿನ ಕೊರೆಯ ಕಾಂಪೌಂಡ್ ನಲ್ಲಿ ಜ. 14 ಮಕರ ಸಂಕ್ರಾಂತಿಯಂದು ಸಂಜೆ ನಡೆದ ಜೆಸಿಐ ಮಡಂತ್ಯಾರು ವಲಯ 15 ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.
ಸಮಾರಂಭದಲ್ಲಿ ನಿರ್ಗಮನ ಅಧ್ಯಕ್ಷ ಜೆಎಮ್ಎಫ್ ವಿಕೇಶ್ ಮಾನ್ಯ ಅವರು ನೂತನ ಅಧ್ಯಕ್ಷೆ ಜೆಸಿ ಅಮಿತಾ ಅಶೋಕ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ನೂತನ ಅಧ್ಯಕ್ಷೆ ಜೇಸಿ ಅಮಿತಾ ಅಶೋಕ್ ವಲಯ ಹದಿನೈದರಲ್ಲಿ ಜೇಸಿಐ ಮಡಂತ್ಯಾರಿಗೆ ತನ್ನದೇ ಆದ ಘನತೆ ಗೌರವವಿದೆ. ಪ್ರಸ್ತುತ ವರ್ಷ ಸಮಾಜಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಬೇಕಾಗುವಂತಹ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಮತ್ತು ಸರ್ವರ ಸಹಕಾರವನ್ನು ಈ ಸಂದರ್ಭದಲ್ಲಿ ಯಾಚಿಸಿದರು.
ಬಳಿಕ ನೂತನ ಕಾರ್ಯದರ್ಶಿ ಆದರ್ಶ ಹಟ್ಟತ್ತೊಡಿ, ಮಹಿಳಾ ಸಂಯೋಜಕಿ ಸಾಯಿಸುಮ ನಾವಡ ಹಾಗೂ ಜೂನಿಯರ್ ಜೆಸಿ ಅಧ್ಯಕ್ಷ ಜೆಜೆಸಿ ಜೀವಿತ್ ವಿ ಪೂಜಾರಿ ಅಧಿಕಾರ ಸ್ವೀಕರಿಸಿದರು. ಬಳಿಕ ನೂತನ ಸದಸ್ಯರಾಗಿ ಜೆಸಿ ಕುಟುಂಬ ಸೇರಿದ ನಾಲ್ಕು ಮಂದಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಪ್ರಾರಂಭದಲ್ಲಿ ನಿರ್ಗಮನ ಅಧ್ಯಕ್ಷ ವಿಕೇಶ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು, ಬಳಿಕ ಸಭಾಧ್ಯಕ್ಷತೆಯನ್ನು ನೂತನ ಅಧ್ಯಕ್ಷೆ ಅಮಿತಾ ಅಶೋಕ್ ವಹಿಸಿದ್ದರು. ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ದಕ್ಷಿಣ ಕನ್ನಡ ಶ್ಯಾಲೆಟ್ ಪಿಂಟೋ ಕಿನ್ನಿಗೋಳಿ, ವಲಯಾಧ್ಯಕ್ಷ ಅಭಿಲಾಶ್ ಬಿ ಎ, ವಲಯ ಉಪಾಧ್ಯಕ್ಷರು ರಂಜಿತ್ ಎಚ್ ಡಿ, ಜಯಂತ್ ಶೆಟ್ಟಿ, ಪೂರ್ವಧ್ಯಕ್ಷರು ಮಡಂತ್ಯಾರು ಘಟಕ, ಬಿಸಿನೆಸ್ ಡೈರೆಕ್ಟರ್ ಅಶೋಕ್ ಗುಂಡಿಯಲ್ಕೆ ಉಪಸ್ಥಿತರಿದ್ದರು. ಜೆಸಿ ಸುರೇಖಾ ಪ್ರಶಾಂತ್ ಜೆಸಿ ವಾಣಿ ವಾದಿಸಿದರು,
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ದಕ್ಷಿಣ ಕನ್ನಡ ಶ್ಯಾಲೆಟ್ ಪಿಂಟೋ ಕಿನ್ನಿಗೋಳಿ ಮಾತನಾಡಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಮಿಂಚುತ್ತಿದ್ದಾರೆ. ಮಹಿಳಾ ನಾಯಕತ್ವ ಮಡಂತ್ಯಾರು ಜೇಸಿ ಸಂಸ್ಥೆಯನ್ನು ಪ್ರಜ್ವಲಿಸುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನ: ಕಾರ್ತಿಕೇಯ ಮದ್ಯಸ್ತ, ನಿಕಟ ಪೂರ್ವ ರಾಷ್ಟ್ರೀಯ ಅಧ್ಯಕ್ಷರು ಮತ್ತು ಜೆಸಿಐ ವಲಯ 15 ರ ಅಧ್ಯಕ್ಷರು ಅಭಿಲಾಷ್ ಬಿ.,ಎ ಅವರನ್ನು ಗೌರವಿಸಲಾಯಿತು. ನಿರ್ಗಮನ ಅಧ್ಯಕ್ಷ ವಿಕೇಶ್ ಮಾನ್ಯ ಮತ್ತು ನಿಕಟ ಪೂರ್ವ ಅಧ್ಯಕ್ಷ ಅಶೋಕ್ ಗುಂಡಿಯಲ್ಕೆ ಅವರನ್ನು ಘಟಕದ ವತಿಯಿಂದ ಸಮಾರಂಭದಲ್ಲಿ ಸಮ್ಮಾನಿಸಲಾಯಿತು.
ಜೆಸಿ ಸಾಯಿಸುಮ ನಾವಡ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು , ವಿಕೇಶ್ ಮಾನ್ಯ ಸ್ವಾಗತಿಸಿದರು, ಜೆಸಿ ಅಜಯ್ ಶೆಟ್ಟಿ, ಜೆಸಿ ತ್ರಿಪ್ತಿ ವಿಕೇಶ್, ಜೆಸಿ ಮನೋಜ್ ಮೈಲೋಡಿ, ಜೆಸಿ ಭವ್ಯ ಟಿ ಪೈ, ಜೆಸಿ ಭಾರತಿ ಕೋಟ್ಯಾನ್, ಜೆಸಿ ಯತೀಶ್ ರೈ ಪರಿಚಯಿಸಿದರು. ನೂತನ ಕಾರ್ಯದರ್ಶಿ ಆದರ್ಶ ಹಟ್ಟತ್ತೊಡಿ ವಂದಿಸಿದರು. ಬೆಳ್ತಂಗಡಿ, ಬಂಟ್ವಾಳ ಜೇಸಿಸ್ ನ ಅಧ್ಯಕ್ಷರು ಮತ್ತು ಸದಸ್ಯರು, ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯತ್ ಮಡಂತ್ಯಾರಿನ ಅಧ್ಯಕ್ಷರು, ಸದಸ್ಯರು, ಮಡಂತ್ಯಾರು ಜೆಸಿ ಪೂರ್ವ ಅಧ್ಯಕ್ಷರುಗಳು ಮತ್ತು ಸದಸ್ಯರು ಮತ್ತು ಜೆಸಿ ಅಭಿಮಾನಿಗಳು ಉಪಸ್ಥಿತರಿದ್ದರು.