23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಶುಭಮಸ್ತು” ಕಾರ್ಯಕ್ರಮ

ಉಜಿರೆ: “ಬಳಸಿದಷ್ಟು ಮುಗಿಯದ ಅಕ್ಷಯಪಾತ್ರೆ ಶಿಕ್ಷಣ, ಅದರ ಸದುಪಯೋಗವನ್ನು ಪಡೆದು ಮುನ್ನುಗ್ಗಿರಿ” ಎಂದು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ನೂತನ ಶೈಕ್ಷಣಿಕ ಸಂಯೋಜಕರಾದ ಡಾ.ಎಸ್.ಎನ್ ಕಾಕತ್ಕರ್ ಇವರು ಹಾರೈಸಿದರು.

“ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ನೆನಪು ಶಾಶ್ವತ, ಶಿಕ್ಷಕರ ಕಾಳಜಿಯ ಒಳ ಅರ್ಥವನ್ನು ತಿಳಿದು ಮುಂದೆ ಬರುವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಿರಿ” ಎಂದು ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್ ಹೇಳಿದರು.

ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಶುಭಮಸ್ತು” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಒಂಬತ್ತನೆ ತರಗತಿ ವಿದ್ಯಾರ್ಥಿಗಳು ಸಮೂಹ ಗಾಯನ, ಸಮೂಹ ನೃತ್ಯ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಸವಿನೆನಪುಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರು ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.

ವಿದ್ಯಾರ್ಥಿ ಅಲ್ರಿಕ್ ಹಾಗೂ ವಿದ್ಯಾರ್ಥಿನಿ ಮಾನ್ಯ ಪೈ ಕಾರ್ಯಕ್ರಮ ನಿರೂಪಿಸಿ, ಶಾಲಾ ಪ್ರಾಂಶುಪಾಲರು ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿ, ಶಿಕ್ಷಕಿ ಕಲ್ಯಾಣಿ ರಾವ್ ವಂದಿಸಿದರು.

Related posts

ಬಜರಂಗದಳ ಕಾರ್ಯಕರ್ತರ ಮೇಲೆ ಗಡಿಪಾರು ವರದಿಯನ್ನು ಹಿಂಪಡೆಯಲು ವಿಶ್ವ ಹಿಂದೂ ಪರಿಷದ್ ಭಜರಂಗದಳ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದಿಂದ ಬೃಹತ್ ಪ್ರತಿಭಟನೆ : ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ರಿಗೆ ಮನವಿ

Suddi Udaya

ಗುಂಡೂರಿ ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ 3ನೇ ವರ್ಷದ 65 ಕೆ.ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ

Suddi Udaya

ವಿದ್ಯಾಮಾತಾದ ವಿದ್ಯಾರ್ಥಿಗಳಿಬ್ಬರು ಕೆ -ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ಮುಂಡಾಜೆ ಹಾ.ಉ. ಸ. ಸಂಘದ ಕಾರ್‍ಯದರ್ಶಿ ದಿ| ಅಶೋಕ್ ಕುಮಾರ್ ರಿಗೆ ಶ್ರದ್ಧಾಂಜಲಿ ಸಭೆ

Suddi Udaya

ಮಡಂತ್ಯಾರು: ರಚನಾ ಸಿಲ್ಕ್ ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

Suddi Udaya

ಧರ್ಮಸ್ಥಳದಲ್ಲಿ ಗೋ ರಥ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ಗೋ ರಥ ಯಾತ್ರೆಗೆ ಶುಭ ಹಾರೈಕೆ

Suddi Udaya
error: Content is protected !!