ಇಳoತಿಲ : ಇಲ್ಲಿಯ ನಾಯಿಮಾರು ನಿವಾಸಿ, ಕೃಷ್ಣಪ್ಪ ಗೌಡರವರ ಪತ್ನಿ ವಾರಿಜಾ (61ವ) ರವರು ಅಲ್ಪಕಾಲದ ಅಸೌಖ್ಯದಿಂದ ಜ. 17 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಪುತ್ರ ಧರ್ಣಪ್ಪ ಗೌಡ, ಪುತ್ರಿಯರಾದ ಇಂದಿರಾ, ಸಾವಿತ್ರಿ, ಲೀಲಾವತಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ನ್ಯಾಯವಾದಿ ಕೆ. ಗೋಪಾಲಕೃಷ್ಣ ಭಟ್, ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮನೋಹರ್ ಕುಮಾರ್, ಮಾಜಿ ಸದಸ್ಯ ತಿಮ್ಮಪ್ಪ ಗೌಡ ಬೋಲ್ಜೆ ಮುಂತಾದವರು ಮೃತರ ಅಂತಿಮ ದರ್ಶನಗೈದರು.