21.1 C
ಪುತ್ತೂರು, ಬೆಳ್ತಂಗಡಿ
January 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಿಗೆ ಜೈನ ಸಮುದಾಯದಿಂದ ಮನವಿ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾರ್ ಅಹಮ್ಮದ್ ರವರನ್ನು ದ. ಕ.ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ನಡೆದ ಅಲ್ಪಸಂಖ್ಯಾತರ. ಸಮಾಲೋಚನಾ ಸಭೆಯಲ್ಲಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೈನ ಸಮುದಾಯದಿಂದ ಮನವಿಯನ್ನು ನೀಡಲಾಯಿತು.

ಪ್ರಮುಖವಾಗಿ ದ. ಕ. ಜಿಲ್ಲೆಯಲ್ಲಿ ಸಸ್ಯಹಾರಿ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸುವ ಬಗ್ಗೆ, ಜೈನ ಪುರೋಹಿತರಿಗೆ ಗೌರವಧನ ನೀಡುವ ಬಗ್ಗೆ, ಬಸದಿಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಬಗ್ಗೆ, ಬಸದಿಗಳಿಗೆ ಸೋಲಾರ್ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ, ಜೈನ್ ಸಮುದಾಯದ ಸ್ಮಶಾನ ಅಭಿವೃದ್ಧಿ ವಸತಿ ರಹಿತ ಸಮುದಾಯದವರಿಗೆ ಅನುದಾನ ನೀಡುವ ಬಗ್ಗೆ ಮುಂತಾದ ಹಲವಾರು ಬೇಡಿಕೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಧರ್ಮಸ್ಥಳದ ಡಾ. ಕೆ. ಜಯಕೀರ್ತಿ ಜೈನ್, ಅರಿಹಂತ ಜೈನ್ ಅಳದಂಗಡಿ, ನೇಮಿರಾಜ್ ಜೈನ್ ಕಾರ್ಕಳ, ಪುಷ್ಪರಾಜ್ ಜೈನ್ ಮಂಗಳೂರು, ರತ್ನಾಕರ್ ಜೈನ್ ಮಂಗಳೂರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರದ ನ್ಯೂನತೆಗಳನ್ನು ಸರಿಪಡಿಸುವಂತೆ ಉಸ್ತುವಾರಿ ಸಚಿವರಿಗೆ ಕೆ.ವಸಂತ ಬಂಗೇರ ಮನವಿ

Suddi Udaya

ಜೆ ಡಿ ಎಸ್ ಅಭ್ಯರ್ಥಿಯಿಂದ ತಾಲೂಕಿನಲ್ಲಿ ಮತಯಾಚನೆ   

Suddi Udaya

ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ದಿನೇಶ್ ನಾಯ್ಕ ನಿಂತಿಕಲ್ಲು ಭಾರತೀಯ ಜನತಾ ಪಾರ್ಟಿ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಬೆಳ್ತಂಗಡಿ ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಪ್ರಗತಿ ಪರಿಶೀಲನಾ ಸಭೆ

Suddi Udaya

ನ.4 : ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಬೃಹತ್ ರಕ್ತದಾನ  ಶಿಬಿರ 

Suddi Udaya

ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರ ಸಾನಿಧ್ಯದಲ್ಲಿ ಪ್ರತಿಷ್ಠಾ ದಿನ ಹಾಗೂ ದೈವಗಳ ನೇಮೋತ್ಸವ

Suddi Udaya
error: Content is protected !!