24.4 C
ಪುತ್ತೂರು, ಬೆಳ್ತಂಗಡಿ
April 19, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜ. 20 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ಯುವ ನಿಧಿ ನೋಂದಣಿ ಶಿಬಿರ

ಬೆಳ್ತಂಗಡಿ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡುವ ಸಲುವಾಗಿ ವಿಶೇಷ ನೋಂದಣಿ ಶಿಬಿರವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಹಯೋಗದಲ್ಲಿ ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯು ಜ.20 ಸೋಮವಾರದಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಅರ್ಹ ಅಭ್ಯರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ತಾಲೂಕು ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮತ್ತು ಸದಸ್ಯ ಕಾರ್ಯದರ್ಶಿ ಹಾಗೂ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ತಿಳಿಸಿದ್ದಾರೆ.

2023 ಮತ್ತು 2024ರ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮಾ ತೇರ್ಗಡೆಯಾಗಿ ನಿರುದ್ಯೋಗಿಯಾಗಿರುವವರು ಅರ್ಜಿ ಸಲ್ಲಿಸಬಹುದು.
ನೋಂದಣಿಯಾದ ಅರ್ಹ ಪದವೀಧರರಿಗೆ ಮಾಹೆಯಾನ ರೂ. 3000/- ಮತ್ತು ಡಿಪ್ಲೋಮ ತೇರ್ಗಡೆಯಾದವರಿಗೆ ಮಾಹೆಯಾನ ರೂ.1500/- ರೂ. ಗಳನ್ನು ನಿರುದ್ಯೋಗ ಭತ್ಯೆಯಾಗಿ ನೇರ ನಗದು ವರ್ಗಾವಣೆ ಮೂಲಕ ಪಾವತಿ ಮಾಡಲಾಗುವುದು.

ನೋಂದಣಿ ಮಾಡಿಸಲು ಅಗತ್ಯವಿರುವ ದಾಖಲೆ ವಿವರಗಳು

  • ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ( ಮೊಬೈಲ್ ಫೋನ್)
  • ಇಮೇಲ್ ಐ ಡಿ
  • ಎಸ್ ಎಸ್ ಲ್ ಸಿ, ಪಿ ಯು ಸಿ, ಪದವಿ/ ಡಿಪ್ಲೋಮ/ ಸ್ನಾತಕೋತ್ತರ ಒರಿಜಿನಲ್ ಸರ್ಟಿಫಿಕೇಟ್
  • ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು
  • ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರಬೇಕು.

Related posts

ಉಜಿರೆ ಶ್ರೀ ವನದುರ್ಗಾ, ಶ್ರೀ ನಾಗ ರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ಅಯೋಧ್ಯೆ ಸಂಭ್ರಮಾಚರಣೆ ಕ್ಷೇತ್ರದ ದೇವರಿಗೆ ವಿಶೇಷ ಪೂಜೆ, ರಾಮನಾಮ ತಾರಕ ಮಂತ್ರ ಹೋಮ, ಭಜನೆ ಸಂಕೀರ್ಣತೆ

Suddi Udaya

ಇಂದಬೆಟ್ಟು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಗುರು ಪೂಜೆ ಮತ್ತು ಸತ್ಯನಾರಾಯಣ ಪೂಜೆ

Suddi Udaya

6 ವರ್ಷದ ಮಗುವಿನ ಪ್ರಾಣ ಕಾಪಾಡಲು ಮಂಗಳೂರಿನಿಂದ ಚೆನ್ನೈ ಗೆ ಆ್ಯಂಬುಲೆನ್ಸ್ ನಲ್ಲಿ ನಿರಂತರ 14 ಗಂಟೆ ಪ್ರಯಾಣ, ಮಚ್ಚಿನದ ವೀರಕೇಸರಿ ಆ್ಯಂಬುಲೆನ್ಸ್ ಚಾಲಕ ದೀಕ್ಷಿತ್ ರಿಗೆ ಸಾರ್ವಜನಿಕರಿಂದ ಶ್ಲಾಘನೆ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಪ.ಪೂ. ವಿಜ್ಞಾನ ವಿಭಾಗದ ಶೈಕ್ಷಣಿಕ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ತಿಪ್ಪೇಸ್ವಾಮಿ ಕೆ.ಟಿ. ಮಾಲಾಡಿ ಗ್ರಾ.ಪಂ.ಗೆ ಭೇಟಿ

Suddi Udaya
error: Content is protected !!