ಕುವೆಟ್ಟು : ಬಂಗೇರ ಬಿಗ್ರೇಡ್ ಬೆಳ್ತಂಗಡಿ ಶ್ರೀಮತಿ ಬಿನುತಾ ಬಂಗೇರರ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಕೆ ವಸಂತ ಬಂಗೇರರ 79ನೇ ಹುಟ್ಟುಹಬ್ಬದ ಪ್ರಯುಕ್ತ ಮದ್ದಡ್ಕ ಬಂಡಿಮಠ ಮೈದಾನದಲ್ಲಿ ಜ 15 ರಂದು ಜರುಗಿದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟಕ್ಕೆ ಗೌರವಾನ್ವಿತ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಆಗಮಿಸಿದ್ದರು.
ಅವರು ರಾತ್ರಿ ನಡೆದ ಮುಕ್ತ ಕಬ್ಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ಬಂಗೇರರು ನಮಗೆಲ್ಲ ಆದರ್ಶವಾಗಿದ್ದರು ಅವರು ಬೆಳ್ತಂಗಡಿ ತಾಲೂಕಿಗೆ ನೀಡಿದ ಸೇವೆ ಬಹಳ ಅಮೂಲ್ಯವಾದದ್ದು ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಯ ಬಗ್ಗೆ ಬಹಳ ಕನಸನ್ನು ಕಂಡಿದ್ದರು ಅವರ ಕನಸನ್ನು ಈಡೇರಿಸಲು ಅವರ ಮಕ್ಕಳೊಂದಿಗೆ ನಾವೆಲ್ಲರೂ ಸೇರಿ ಸಹಕರಿಸೋಣ ಇಂತಹ ಕಬ್ಬಡಿ ಪಂದ್ಯಾಟವನ್ನು ಆಯೋಜಿಸುವ ಮೂಲಕ ಅವರ ಹೆಸರನ್ನು ನೆನಪಿಸುವ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬಂಗೇರ ಬಿಗ್ರೇಡ್ ನ ಅಧ್ಯಕ್ಷೆ ಬಿನುತಾ ಬಂಗೇರ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ, ಮಾಜಿ ಸಚಿವರುಗಳಾದ ವಿನಯ ಕುಮಾರ ಸೊರಕೆ, ರಮಾನಾಥ ರೈ, ಗಂಗಾಧರ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆಯ ಅಧ್ಯಕ್ಷ ರಾಕೇಶ್ ಮಲ್ಲಿ, ಮಾಜಿ ಶಾಸಕ ಜೆ ಆರ್ ಲೋಬೊ, ಶಕುಂತಲಾ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ, ಅಮರಶ್ರೀ ಮೂಡಬಿದ್ರೆ ಬೆಳ್ತಂಗಡಿ ತಾಲೂಕು ಅಮೆಚೂರು ಕಬಡ್ಡಿ ಸಂಸ್ಥೆಯ ಅಧ್ಯಕ್ಷ ರಂಜನ್ ಗೌಡ. ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಗೌರವಾಧ್ಯಕ್ಷ ತೇಜೋಮಯ. ಸಂಜೀವ್ ಕಣೆಕಲ್ ವಿ ಪಿ ಇನ್ವೆಸ್ಟ್ ಮೆಂಟ್ ಬೆಂಗಳೂರು ಬೆಳ್ತಂಗಡಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಆರ್ಯ ಈಡಿಗ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಧರ್ಮ ವಿಜೇತ್, ಬಂಗೇರ ಬಿ ಗ್ರೇಡ್ ನ ಗೌರವಾಧ್ಯಕ್ಷೆ ಪ್ರೀತಿತಾ ಧರ್ಮವಿಜೀತ್, ಉಪಾಧ್ಯಕ್ಷ ಅನೂಪ್ ಎo ಬಂಗೇರ, ಪ್ರಧಾನ ಕಾರ್ಯದರ್ಶಿ ಕೆ ಸಲೀಮ್, ಜೊತೆ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಕೋಶಾಧಿಕಾರಿ ರಾಜಶ್ರೀ ವಿ ರಮನ್, ಮತ್ತಿತರರು ಉಪಸ್ಥಿತರಿದ್ದರು.
ಚಂದ್ರಪ್ಪ ಎರಂಗಲ್ಲು ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾಟದ ಫಲಿತಾಂಶ: ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಪ್ರಥಮ ಸರಕಾರಿ ಪ್ರೌಢಶಾಲೆ ಗೇರುಕಟ್ಟೆ, ದ್ವಿತೀಯ ವಿವೇಕಾನಂದ ಪ್ರೌಢಶಾಲೆ ಮುಂಡಾಜೆ, ತೃತೀಯ ಹೋಲಿ ರೆಡಿಮೇರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ಚತುರ್ಥ ಸರಕಾರಿ ಪ್ರೌಢಶಾಲೆ ಕೊಯ್ಯೂರು, ಬಾಲಕಿಯ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಕೊಯ್ಯೂರು, ದ್ವಿತೀಯ ಮರಾಠಿ ದೇಸಾಯಿ ವಸತಿ ಶಾಲೆ ಮಚ್ಚಿನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಲಾಡಿ, ಚತುರ್ಥ ಹೋಲಿ ರೆಡಿಮೇರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ವಲಯ ಮಟ್ಟದ ಪುರುಷರ ಮುಕ್ತ ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ನಾವೂರ ಬೆಳ್ತಂಗಡಿ, ದ್ವಿತೀಯ ಕಟ್ಟೆ ಫ್ರೆಂಡ್ಸ್ ಕಟ್ಟೆ, ತೃತಿಯ ಸುಲ್ತಾನ್ ಎಟೆಕಾರ್ಸ ಸುನ್ನತ್ ಕೆರೆ ಚತುರ್ಥ ಮಾಲಾಡಿ, ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಸಾಯಿ ರಾಮ್ ಫ್ರೆಂಡ್ಸ್ ಗುರುವಾಯನಕೆರೆ, ದ್ವಿತೀಯ ಆಳ್ವಾಸ್ ಮೂಡಬಿದ್ರೆ, ತೃತೀಯ ಎನ್ಎಂ ಸಿ ಸುಳ್ಯ, ಚತುರ್ಥ ಸುಲ್ತಾನ್ ಎಟೆಕಾರ್ಸ್ ಸುನ್ನತ್ ಕೆರೆ.