ಬಳಂಜ:ಬಳಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಪುಷ್ಪಾವತಿ ಸತೀಶ್ ಪೂಜಾರಿ ಹೇವ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪ್ರಮೀಳಾ ಜಯಾನಂದ ಪೂಜಾರಿ ನಂದ್ರಟ್ಟ ನಾಲ್ಕೂರು, ನಿರ್ದೇಶಕರಾಗಿ ,ಮಾಲಿನಿ ಬಾಲಕೃಷ್ಣ ಯೈಕುರಿ, ಉಷಾ ದಿನೇಶ್ ಕುದ್ರೋಟ್ಟು, ನಂದೀನಿ ಸುರೇಶ್ ಜೈಮಾತ, ಅರುಣ ಸಂತೋಷ್ ಹೆಗ್ಡೆ ವೀರಮಾರುತಿ ಬಳಂಜ, ಜಯಶ್ರೀ ಅಶೋಕ್, ಮುಕ್ತ, ಚಂದ್ರಾವತಿ, ಜಯಶ್ರೀ ರಮೇಶ್, ಬೇಬಿ ಅಟ್ಲಾಜೆ ಆಯ್ಕೆಯಾದರು.
13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಿಂದುಳಿದ ವರ್ಗ ಬಿ ಮತ್ತು ಪರಿಶಿಷ್ಟ ಪಂಗಡದ ಯಾವುದೇ ಅಭ್ಯರ್ಥಿಗಳು ಸ್ಪರ್ದಿಸದ ಕಾರಣ 11 ಮಂದಿ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕವಿತಾ ನಿರ್ವಹಿಸಿದರು. ಹಾಗೂ ಬಳಂಜ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾರತಿ ಭಟ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.