20.7 C
ಪುತ್ತೂರು, ಬೆಳ್ತಂಗಡಿ
January 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಹಾಗೂ ಉನ್ನತೀಕರಣ ಕಾಮಗಾರಿಗಳ ಶಿಲಾನ್ಯಾಸ: ಬಿ.ಪಿ.ಹೆಚ್ ಲ್ಯಾಬ್ ಮತ್ತು 12 ಬೆಡ್ ಗಳ ಐಸೋಲೇಶನ್ ವಾರ್ಡ್ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ: ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಶೀಘ್ರವಾಗಿ ಹೆಚ್ಚಿಸುವ ಪ್ರಯತ್ನವನ್ನು ಕೈಗೊಳ್ಳಬೇಕು.ಎಲ್ಲಾ ಸೌಕರ್ಯಗಳಿದ್ದರು ಹೆರಿಗೆ ಪ್ರಮಾಣ ಯಾಕೇ ಕಡಿಮೆಯೆಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಯ ವೈದ್ಯಾಧಿಕಾರಿಯವರನ್ನು ಪ್ರಶ್ನಿಸಿದರು.

ಅವರು ಜ.18 ರಂದು ಬಿ.ಪಿ.ಹೆಚ್ ಲ್ಯಾಬ್ ಮತ್ತು 12 ಬೆಡ್ ಗಳ ಐಸೋಲೇಶನ್ ವಾರ್ಡ್ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ರೋಗಿಗಳಿಗೆ ಅವಶ್ಯಕವಿರುವ ಔಷಧಗಳನ್ನು ಪೂರ್ಣ ಪ್ರಮಾಣದಲ್ಲಿ ದೊರೆಯುವಂತೆ ಕ್ರಮವಹಿಸಬೇಕು. ರೋಗಿಗಳನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಬೇಕೆಂದರು.

ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಹಾಗೂ ಉನ್ನತೀಕರಣ ಕಾಮಗಾರಿಗಳ ಶಿಲಾನ್ಯಾಸವನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು.

ಈ‌ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್,ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ, ನಾಗೇಶ್ ಗೌಡ, ಪಟ್ಟಣ ಪಂಚಾಯತ್ ಸದಸ್ಯ ಶರತ್ ಶೆಟ್ಟಿ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಅಪರ ಸರಕಾರಿ ವಕೀಲ ಮನೋಹರ್ ಇಳಂತಿಳ, ಜಿ.ಪಂ ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ, ನಮಿತಾ, ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಬೆಳ್ತಂಗಡಿ, ಪ್ರಮುಖರಾದ ಉಷಾ ಶರತ್, ಕುಶಾಲಪ್ಪ ಗೌಡ, ಜೆಸಿಂತಾ ಮೋನಿಸ್, ಯಶೋಧ ಕುತ್ಲೂರು, ಅಕ್ಬರ್ ಬೆಳ್ತಂಗಡಿ, ವಸಂತ ಬಿಕೆ, ಪುನೀತ್ ಮಾಲಾಡಿ, ಪ್ರಶಾಂತ್ ಮಚ್ಚಿನ, ಈಶ್ವರ ಭಟ್, ಜಯವಿಕ್ರಮ್ ಕಲ್ಲಾಪು, ನಿತೀಶ್ ಕುಕ್ಕೇಡಿ, ಮೋಹನ್ ಶೆಟ್ಟಿಗಾರ್, ಕೇರಿಮಾರ್ ಬಾಲಕೃಷ್ಣ ಗೌಡ, ಸುಭಾಶ್ಚಂದ್ರ ರೈ ಅಳದಂಗಡಿ,ಸಂಜೀವ ಪೂಜಾರಿ ಕೊಡಂಗೆ, ಭಗೀರಥ ಜಿ, ಸೌಮ್ಯ ಲಾಯಿಲ, ವನಿತಾ, ಸವಿತಾ,ಜಿನತ್,ಗುಣವತಿ,ಮರೀನಾ ಪಿಂಟೋ,ಮಧುರ, ಸುಚಿತ್ರಾ ಕೊಲ್ಲಾಜೆ, ಧನಂಜಯ ಗುರುವಾಯನಕೆರೆ ಉಪಸ್ಥಿತರಿದ್ದರು.

Related posts

ಉರುವಾಲು: ಮನೆಗೆ ಸಿಡಿಲು ಬಡಿದು ಅಪಾರ ಹಾನಿ: ಅದೃಷ್ಟವಶಾತ್ ಅಪಾಯದಿಂದ ಪಾರಾದ ಮನೆಯವರು

Suddi Udaya

ಏಕಾಏಕಿ ವಾಹನದ ಮುಂಭಾಗಕ್ಕೆ ಹಾರಿ ರಸ್ತೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಗೆ ಹಲವು ಪ್ರಶಸ್ತಿ

Suddi Udaya

ರೆಂಕೆದಗುತ್ತು ನಿವಾಸಿ ಜನಾರ್ಧನ ನಿಧನ

Suddi Udaya

ಸ್ಪಂದನಾ ನಿಧನ: ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಸಂತಾಪ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 12 ತೆಂಗಿನಕಾಯಿ ಗಣಹೋಮ ಮತ್ತು ಚಂಡಿಕಾ ಹೋಮ

Suddi Udaya
error: Content is protected !!