ನಾರಾವಿ: ನಾರಾವಿ ವಲಯ ಹೆಗ್ಗಡೆ ಸಂಘದ ನೂತನ ಅಧ್ಯಕ್ಷ ಕಾರ್ಯದರ್ಶಿ ಆಯ್ಕೆಯ ಸಭೆಯು ಜ.19 ರಂದು ನಾರಾವಿ ಬಿರ್ಮೋಟ್ಟ್ ಮಹಾದೇವಿ ಮಂದಿರದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಸದಾನಂದ ಹೆಗ್ಡೆ ಬನ್ನಡ್ಕ, ಕಾರ್ಯದರ್ಶಿಯಾಗಿ ಹರೀಶ್ ಹೆಗ್ಡೆ ದೇವಗಿರಿ ಮರೋಡಿ, ಜೊತೆ ಕಾರ್ಯದರ್ಶಿಯಾಗಿ ಮುಕೇಶ್ ಹೆಗ್ಡೆ ಕುವೆಟ್ಟು ಮರೋಡಿ ಆಯ್ಕೆಯಾಗಿರುತ್ತಾರೆ.
ಮಹಿಳಾ ಸಂಘದ ನೂತನ ಅಧ್ಯಕ್ಷರಾಗಿ ನವ್ಯ ಪ್ರವೀಣ್ ಹೆಗ್ಡೆ ಅಂಜಲಿ, ಕಾರ್ಯದರ್ಶಿಯಾಗಿ ಚಿತ್ರಾಕ್ಷಿ ಎಸ್ ಹೆಗ್ಡೆ ಶ್ರೇಷ್ಠ ಮರೋಡಿ, ಜೊತೆ ಕಾರ್ಯದರ್ಶಿಯಾಗಿ ಸ್ವಾತಿ ಸುರೇಶ್ ಹೆಗ್ಡೆ ಬೊಲ್ಲೋಟ್ಟು ಆಯ್ಕೆಯಾಗಿದ್ದಾರೆ.
ಕಳೆದ ಅವಧಿಯ ಅಧ್ಯಕ್ಷರಾದ ಶುಭರಾಜ ಹೆಗ್ಡೆ ಹಾಗೂ ಮಹಿಳಾ ಸಂಘದ ಅಧ್ಯಕ್ಷರಾದ ರತ್ನಾವತಿ ಹೆಗ್ಡೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಕಾರ್ಯದರ್ಶಿಯವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಹಿರಿಯರಾದ ರವಿ ಹೆಗ್ಡೆ ಆಯ್ಕೆಯಾದ ಎಲ್ಲರನ್ನು ಅಭಿನಂದಿಸಿದರು.