ಮುಂಡಾಜೆ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಂಡಾಜೆ ಇದರ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 12 ರಲ್ಲಿ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ.
ಸಾಲೇತರ ಪಕ್ಷೇತರ ಅಭ್ಯರ್ಥಿ 1ಸ್ಥಾನ ಪಡೆದುಕೊಂಡಿದ್ದಾರೆ.
ಭಾರಿ ಕುತೂಹಲ ಕೆರಳಿಸಿದ ಮುಂಡಾಜೆ ಸಿಎ ಬ್ಯಾಂಕಿನ ಚುನಾವಣೆಯಲ್ಲಿ ಸಹಕಾರ ಭಾರತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಕಜೆ ವೆಂಕಟೇಶ್ವರ ಭಟ್,ಪ್ರಕಾಶ ನಾರಾಯಣ ರಾವ್,ರವಿ ಪೂಜಾರಿ, ರಾಘವ ಗೌಡ ಕುಡುಮಡ್ಕ,ಅಜಯ್ ಕಲ್ಲಿಕಾಟ್ ಆ್ಯಂಟನಿ,ಅಶ್ವಿನಿ ಹೆಬ್ಬಾರ್,ಮೋಹಿನಿ,ಎಂ.ಶಶಿಧರ ಕಲ್ಮಂಜ,ಶಿವಪ್ರಸಾದ್ ಗೌಡ ದೇವಸ್ಯ,ರಾಘವ ಕಲ್ಮಂಜ,ಚೆನ್ನಕೇಶವ ಅರಸಮಜಲು ಜಯಗಳಿಸಿದರು. ಹಾಗೂ ಸಾಲೇತರ ಪಕ್ಷೇತರ ಅಭ್ಯರ್ಥಿ ಸುಮಾ ಎಂ ಗೋಖಲೆ ವಿಜಯಿಯಾದರು.
ಜ. 19 ರಂದು ಚುನಾವಣೆ ನಡೆದಿದ್ದು ಚುನಾವಣಾಧಿಕಾರಿಯಾಗಿ ಪ್ರತಿಮಾ ಬಿ.ವಿ ಸಹಕರಿಸಿದರು.ಮುಂಡಾಜೆ ಸಿಎ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಪ್ರಭು ಹಾಗೂ ಸಿಬ್ಬಂದಿಗಳು ಸಹಕರಿಸಿದರು.