ಗುರುವಾಯನಕೆರೆ: ಖ್ಯಾತ ಉದ್ಯಮಿಗಳಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಇವರು ಜ.20ರಂದು ಕುಂಭಾಭಿಷೇಕ ಸಮಿತಿ ಅಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡ, ನವಶಕ್ತಿ ಇವರೊಂದಿಗೆ ಶ್ರೀ ಕ್ಷೇತ್ರ ಅರಮಲೆ ಬೆಟ್ಟಕ್ಕೆ ಭೇಟಿ ನೀಡಿ, ಶ್ರೀ ಕೊಡಮಣಿತ್ತಾಯ ದೈವದ ಅನುಗ್ರಹ ಪಡೆದು ಬ್ರಹ್ಮಕುಂಭಾಭಿಷೇಕಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತದಾರ ಸುಖೇಶ್ ಕುಮಾರ್ ಕಡಂಬು, ಪ್ರವೀಣ್ ಕುಮಾರ್ ಜೈನ್ ಪಾಡ್ಯಾರು ಬೀಡು,
ಸಮಿತಿ ಕಾಯಾ೯ಧಕ್ಷ ಸುಮಂತ್ ಕುಮಾರ್ ಜೈನ್, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ಸುನೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.