ಬೆಳ್ತಂಗಡಿ: ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದಿಂದ ಮುದರಂಗಡಿಯಲ್ಲಿ ಜ.19 ರಂದು ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ, ಮೂಲ್ಕಿಯಲ್ಲಿ ನಡೆದ ಬಿಲ್ಲವರ ಸಮಾವೇಶದಲ್ಲಿ ಬೆಳ್ತಂಗಡಿಯ ಸಂಚಾಲಕಿಯಾಗಿ ಸೇವೆ ಸಲ್ಲಿಸಿದ ಶಾಂತಾ ಬಂಗೇರರವರನ್ನು
ಗೌರವಿಸಿ, ಸನ್ಮಾನಿಸಲಾಯಿತು.
ಸಂಘಟನಾತ್ಮಕವಾಗಿ ಸಮಾಜಮುಖಿಯಾಗಿ ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಜೊತೆ ಸೇವೆ ಸಲ್ಲಿಸುತ್ತಿರುವ ಶಾಂತ ಬಂಗೇರರವರನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ಹಾಗೂ ಸಮಿತಿ ಪದಾಧಿಕಾರಿಗಳು ಸನ್ಮಾನಿಸಿದರು.ಬೆಳ್ತಂಗಡಿ ತಾಪಂ ಮಾಜಿ ಸದಸ್ಯೆ ಕೇಶವತಿ ಜೊತೆಗಿದ್ದರು.