ಬೆಳ್ತಂಗಡಿ: ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥೆ ಮುಂಬೈ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮಹಾರಾಷ್ಟ್ರ ಘಟಕ ದ ಆಶ್ರಯದಲ್ಲಿ ಮುಂಬೈಯಲ್ಲಿ ನಡೆದ ಭಜನೋತ್ಸವದಲ್ಲಿ ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥೆಯ ಕುಣಿತ ಭಜನಾ ತರಬೇತಿ ದಾರರಾಗಿ ಆಯ್ಕೆಗೊಂಡು ಮುಂಬೈ ಮಹಾನಗರದ 120 ಭಜನಾ ಮಂಡಳಿಗಳಿಂದ ಆಯ್ದ 140 ಕ್ಕೂ ಅಧಿಕ ಮಕ್ಕಳಿಗೆ ಕುಣಿತ ತರಬೇತಿಯನ್ನು ನೀಡಿ ಭಜನೋತ್ಸವದಲ್ಲಿ ಉತ್ತಮ ರೀತಿಯಲ್ಲಿ ಕುಣಿತ ಭಜನೆಯನ್ನು ಪ್ರಸ್ತುತ ಪಡಿಸಿದ ಕುಣಿತ ಭಜನಾ ತರಬೇತಿದಾರರಾದ ಭಜಕ ಶ್ರೀ ಹರಿ ಪ್ರಿಯ ವಿ ಹರೀಶ್ ನೆರಿಯ ರವರಿಗೆ ಭಜನೋತ್ಸವದ ವೇದಿಕೆಯಲ್ಲಿ ಮುಂಬೈ ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥೆ ಯಿಂದ ಗುರುವಂದನೆ ಅರ್ಪಿಸಿ ಗೌರವಿ ಸಲಾಯಿತು.
ವೇದಿಕೆಯಲ್ಲಿ ಮುಂಬೈಯ ಭಜನಾ ಮಂಡಳಿಗಳ ಒಕ್ಕೂಟ ಸಂಸ್ಥೆಯ ಅಧ್ಯಕ್ಷ ದೇವು ಪೂಜಾರಿ ಹಾಗೂ ಸಮಿತಿಯ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಹಲವಾರು ಗಣ್ಯರು ಉಪಸ್ಥಿತರಿದ್ದರು.