ಉಜಿರೆ ಎಸ್.ಡಿ.ಎಮ್. ಮಲ್ಟಿ-ಸ್ಪೆಷಾಲಿಟಿ ಹಾಸ್ಪಿಟಲ್, ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳೆಪೇಟೆ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಂಟಿನಿ ಇವರ ಸಹಯೋಗದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವು ಜ.26 ರಂದು ಬೆಳಿಗ್ಗೆ ಗಂಟೆ 9.30 ರಿಂದ ಮಧ್ಯಾಹ್ನ ಗಂಟೆ 2.00ರ ವರೆಗೆ ಸ.ಹಿ.ಪ್ರಾ. ಶಾಲೆ, ಹಳೆಪೇಟೆ, ಉಜಿರೆಯಲ್ಲಿ ನಡೆಯಲಿದೆ.
ಶಿಬಿರದಲ್ಲಿ ಭಾಗವಹಿಸುವ ತಜ್ಞರು : ಮೂಳೆ ಶಸ್ತ್ರಚಿಕಿತ್ಸಾ ತಜ್ಞರು, ಕಣ್ಣಿನ ತಜ್ಞರು, ಚರ್ಮರೋಗ ತಜ್ಞರು, ಸ್ತ್ರೀ-ರೋಗ ತಜ್ಞರು, ಕಿವಿ-ಮೂಗು-ಗಂಟಲು ತಜ್ಞರು, ಮಕ್ಕಳ ರೋಗ ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಮೆಡಿಸಿನ್ ವಿಭಾಗ
ಶಿಬಿರದಲ್ಲಿ ಲಭ್ಯವಿರುವ ಉಚಿತ ವೈದ್ಯಕೀಯ ಸೇವೆಗಳು: ಈ.ಸಿ.ಜಿ., ಬಿ.ಪಿ., ಮಧುಮೇಹ, ಸ್ಯಾಚುರೇಶನ್ ಪರೀಕ್ಷೆ ಹೃದಯರೋಗ ತಪಾಸಣೆ, ಥೈರಾಯ್ಡ್ ತಪಾಸಣೆ, ಉಬ್ಬಸ, ಕಣ್ಣಿನ ಪರೀಕ್ಷೆ ಎಲುಬು ಮೂಳೆ ತಪಾಸಣೆ, ಸ್ತ್ರೀ-ರೋಗ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ, ಚರ್ಮರೋಗ ತಪಾಸಣೆ, ಕಿವಿ-ಗಂಟಲು-ಮೂಗು ತಪಾಸಣೆ.