ಬೆಳ್ತಂಗಡಿ: ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಕಾವೂರು ಮಂಗಳೂರು ಇಲ್ಲಿನ ಪೂಜ್ಯ ಶ್ರೀ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವಾಧ್ಯಕ್ಷ, ಉದಯವಾಣಿ ಪತ್ರಿಕೆಯ ಮುಖ್ಯ ವರದಿಗಾರ ಚೈತ್ರೇಶ್ ಇಳಂತಿಲರವರ ‘ಅಕ್ಷೋಭ್ಯ’ ನೂತನ ಮನೆಗೆ ಜ.20 ರಂದು ಭೇಟಿ ನೀಡಿ ಹರಸಿ, ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಗಂಗಾಧರ ಗೌಡ, ಪುತ್ತೂರು ಮಾಜಿ ಶಾಸಕ ಸಂಜೀವ ಗೌಡ ಮಠಂದೂರು, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಜತೆಗಿದ್ದರು.
ಆಗಮಿಸಿದ ಸ್ವಾಮೀಜಿ ಹಾಗೂ ಗಣ್ಯರಿಗೆ ಚೈತ್ರೇಶ್ ಇಳಂತಿಲ ಮತ್ತು ಕುಟುಂಸ್ಥರು ಫಲ ಕಾಣಿಕೆ ನೀಡಿ ಗೌರವಿಸಿದರು. ಇದೇ ವೇಳೆ ಮಾಜಿ ಸಚಿವ ಗಂಗಾಧರ ಗೌಡ ಹಾಗೂ ಸಂಜೀವ ಮಠಂದೂರು ಅವರನ್ನು ಗೌರವಿಸಿದರು. ಬಳಿಕ ಸ್ವಾಮೀಜಿ ಹಾಗೂ ಗಣ್ಯರಿಗೆ ಹಣ್ಣಿನ ಗಿಡಗಳನ್ನು ನೀಡಿ ಸತ್ಕರಿಸಿದರು.
ಹಣ್ಣಿನ ಗಿಡದ ಮಹತ್ವ ತಿಳಿದ ಶ್ರೀಗಳು, ನೆರದವರಿಗೆ ಅಕ್ಷತೆ ನೀಡಿ ನೂತನ ಹರಿಸಿದರು.