ಬೆಳ್ತಂಗಡಿ : ಫೆಡರೇಷನ್ ಆಫ್ ಕರ್ನಾಟಕ ಆಟೋ ಡ್ರೈವರ್ಸ್ ಯೂನಿಯನ್ ಬೆಳ್ತಂಗಡಿ, ಬಿ.ಜಿ ಆಟೋ ಡ್ರೈವರ್ಸ್ ಯೂನಿಯನ್ ಬೆಳ್ತಂಗಡಿ – ಗುರುವಾಯನಕೆರೆ 18ವರ್ಷದ ಮಹಾಸಭೆಯು ಜ.21ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರುಗಿತು.
ಉದ್ಘಾಟನೆಯನ್ನು ಬೆಳ್ತಂಗಡಿ ಸಂಚಾರಿ ಅರಕ್ಷಕ ಠಾಣೆ ಠಾಣಾಧಿಕಾರಿ ಅರ್ಜುನ್ ಹೆಚ್.ಕೆ ನೆರವೇರಿಸದರು. ಅಧ್ಯಕ್ಷತೆಯನ್ನು ತಾಲೂಕು ಬಿ.ಜಿ. ಆಟೋ ಚಾಲಕ ಮಾಲಕರ ಸಂಘ ಅಧ್ಯಕ್ಷ ಅಬೂಬಕ್ಕರ್ ವಹಿಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ಕಾರ್ಮಿಕ ಮುಖಂಡ ಬಿ.ಎಂ. ಭಟ್, ಬೆಳ್ತಂಗಡಿ ತಾಲೂಕು ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಬಿ.ಎ. ರಝಾಕ್, ಉಪಸ್ಥಿತರಿದ್ದರು.
ಈ ವೇಳೆ ಬೆಳ್ತಂಗಡಿ ಹಿರಿಯ ಆಟೋ ಚಾಲಕ ಶಿವರಾಂ ಶೆಟ್ಟಿರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಜಿ. ಆಟೋ ಚಾಲಕ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಎಂ. , ಆಟೋ ಚಾಲಕ ಸಂಘದ ಸದಸ್ಯರು ಉಪಸ್ಥಿತರಿದ್ದರು.