ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತ್ ನ 2024-25 ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜ.22ರಂದು ನಡೆಯಿತು.
ನೋಡೆಲ್ ಅಧಿಕಾರಿಯಾಗಿ ಅರಣ್ಯ ಅಧಿಕಾರಿ ಅಶೋಕ್ ವಹಿಸಿದರು. ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ . ಲೆಕ್ಕ ಪತ್ರವನ್ನು ಸಭೆಗೆ ಮಂಡಿಸಿದರು.
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗ, ಪಸು ಸಂಗೋಪನ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯವರು ಗ್ರಾಮ ಸಭೆಯಲ್ಲಿ ಇಲಾಖಾ ಮಾಹಿತಿ ನೀಡಿದರು.
ಈ ವೇಳೆ ವಿಶೇಷ ವಿಕಲಚೇತನರ 13 ಮಂದಿಗೆ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು. ಪಂಚಾಯತಿ ಸ್ವಂತ ನಿಧಿ ಅನುದಾನದಿಂದ 6 ಶಾಲೆಗಳಾದ ಗೇರುಕಟ್ಟೆ ಪ್ರೌಢಶಾಲೆ, ಕೊರಿಂಜ ಪ್ರಾಥಮಿಕ ಶಾಲೆ, ನಾಳ ಹಿರಿಯ ಪ್ರಾಥಮಿಕ ಶಾಲೆ, ಗೋವಿಂದರ ಶಾಲೆ, ರಕ್ತೇಶ್ವರಿ ಪದವು, ಬೊಳ್ಳುಕಲ್ಲು ಶಾಲೆಗೆ ಕ್ರೀಡಾ ಸಾಮಾಗ್ರಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಇಂದಿರಾ, ಸದಸ್ಯರಾದ ವಿಜಯಕುಮಾರ್, ಸುಧಾಕರ್, ಕುಸುಮ ಎನ್. ಬಂಗೇರ, ಮರಿಟಾ ಪಿಂಟೋ, ಶ್ವೇತಾ, ಯಶೋಧರ ಶೆಟ್ಟಿ , ಅಬ್ದುಲ್ ಲತೀಫ್, ಮೋಹಿನಿ, ಪುಷ್ಪಲತಾ ಅಬ್ದುಲ್ ಕರೀಂ, ಹರೀಶ್ ಕುಮಾರ್, ಕಾರ್ಯದರ್ಶಿ ಕುಂಞಿ ಉಪಸ್ಥಿತರಿದ್ದರು.