ಗುರುವಾಯನಕೆರೆ : ಮುಂದಿನ ಫೆಬ್ರವರಿಯಲ್ಲಿ ಕುಂಭಾಭಿಷೇಕ ಮಹೋತ್ಸವ ನಡೆಯಲಿರುವ ಗುರುವಾಯನಕೆರೆ ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ
ಖ್ಯಾತ ಉದ್ಯಮಿಗಳಾದ ದಿನೇಶ್ ಅಮರನಾಥ ಶೆಟ್ಟಿ , ಪೂನಾ ಶಕ್ತಿನಗರ, ಸಂತೋಷ್ ಕುಮಾರ್ ಜೈನ್ ಪಡಂಗಡಿ, ರಾಜಪ್ರಕಾಶ್ ಶೆಟ್ಟಿ ಪಡ್ಡೆಯಿಲು, ಪ್ರಕಾಶ್ ಕಾಮತ್ ಪ್ರಾಂಶುಪಾಲರು, SDM ITI ಉಜಿರೆ ಇವರು ಭೇಟಿ ನೀಡಿ ಶ್ರೀ ಕೊಡಮಣಿತ್ತಾಯ ದೈವದ ಅನುಗ್ರಹ ಪಡೆದು ಬ್ರಹ್ಮಕುಂಭಾಭಿಷೇಕಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತದಾರ ಸುಖೇಶ್ ಕುಮಾರ್ ಕಡಂಬು, ಸುನಿಶ್ ಕುಮಾರ್, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.