ಬೆಳ್ತಂಗಡಿ: ಬೆಳ್ತಂಗಡಿ ಚರ್ಚ್ ರೋಡ್ ಬಸ್ ನಿಲ್ದಾಣದ ಬಳಿ ಲಕ್ಷಣ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭವಾದ ಅನ್ವೇಷಣ ಎಂಬ ಸಂಸ್ಥೆ ಜ.22 ರಂದು ಶುಭಾರಂಭಗೊಂಡಿತು.
ಉಜಿರೆ ಲಕ್ಷ್ಮೀ ಗ್ರೂಪ್‌ನ ಮಾಲಕ ಮೋಹನ್ ಕುಮಾರ್ ಮತ್ತು ಖ್ಯಾತ ನ್ಯಾಯವಾದಿ ಧನಂಜಯ್ ಕುಮಾರ್ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ಅಧ್ಯಕ್ಷ ಹೆನ್ರಿ ಲೋಬೊ, ಗುತ್ತಿಗೆದಾರರಾದ ಕೃಷ್ಣಪ್ಪ, ಮೇಲ್ವಿನ್ ಫೆರ್ನಾಂಡಿಸ್, ಉದ್ಯಮಿ ಯಶೋಧರ, ಗೀತಾ, ಶ್ರೀಧರ್, ಶೋಭಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಲ. ಕಿರಣ್ ದೊಂಡೊಲೆ ನಿರೂಪಿಸಿ, ಮಾಲಕರಾದ ಅಕ್ಷತಾ ಮುಕೇಶ್ ಎಲ್ಲರ ಸಹಕಾರ ಕೋರುತ್ತಾ ಧನ್ಯವಾದವಿತ್ತರು.
ಸಂಸ್ಥೆಯ ಸರ್ವಿಸ್‌ಗಳು
ನೀರಿನ ಟ್ಯಾಂಕ್ ಶುಚಿಗೊಳಿಸುವಿಕೆ, ಇಂಟರ್‌ಲಾಕ್ ಶುಚಿಗೊಳಿಸುವಿಕೆ, ಕಂಪೌಂಡ್ ವಾಶ್, ಪೈಂಟಿಂಗ್ ಗುತ್ತಿಗೆದಾರ ಸೇವೆಗಳು, ಜನರೇಟರ್ ಬಾಡಿಗೆ ಸೇವೆಗಳು, ನೀರಿನ ಮಟ್ಟ ನಿಯಂತ್ರಕ, ಮೊಬೈಲ್ ಸ್ಟಾರ್ಟರ್ ಮತ್ತು ಕೋರ್ ಕಟ್ಟಿಂಗ್ ಮೊದಲಾದ ಸರ್ವಿಸ್‌ಗಳು ಸಂಸ್ಥೆಯಲ್ಲಿ ದೊರೆಯಲಿದೆ.