34.1 C
ಪುತ್ತೂರು, ಬೆಳ್ತಂಗಡಿ
January 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಡಂತ್ಯಾರು ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಾಮೋತ್ಸವ

ಮಡಂತ್ಯಾರು: ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮರ್ಯಾದ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಲೋಕಾರ್ಪಣೆಯ ಮೊದಲ ಸಂಭ್ರಮಾಚರಣೆಯ ಪ್ರಯುಕ್ತ ಶ್ರೀರಾಮೋತ್ಸವ ಕಾರ್ಯಕ್ರಮವು ಜ. 22 ರಂದು ಗಣಪತಿ ಮಂಟಪ, ಮಡಂತ್ಯಾರಿನಲ್ಲಿ ನಡೆಯಿತು.

ಬಳಿಕ ಗೋಪೂಜೆ, ದೀಪಾಲಂಕಾರ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರೆಂಕಿ ಹಾಗೂ ಮಹಿಳಾ ಭಜನಾ ತಂಡ ಪಾರೆಂಕಿ ರವರಿಂದ ಭಜನೆ ಕಾರ್ಯಕ್ರಮ ನಡೆಯಿತು.

ಸರಸ್ವತಿ ಭಜನಾ ಮಂಡಳಿಯ ಭಜನಕಾರರಿಂದ ಭಜನಾ ಸೇವೆ ನಡೆಯಿತು. ಗೋ ಪೂಜೆ ಮತ್ತು ಹಣತೆ ಹಚ್ಚಿ ವಿಜೃಂಭಣೆಯಿಂದ ಸಂಭ್ರಮಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಾರ್ಯಕರ್ತರಾದ ಪುರುಷೋತ್ತಮ ರೈ ಅರ್ಮುಡ ವಹಿಸಿದ್ದರು. ಗಣೇಶ್ ಕಾರ್ಣಿಕ್ ಮಾಜಿ ವಿಧಾನ ಪರಿಷತ್ ಸದಸ್ಯರು, ಶ್ರೀರಾಮ ಮಂದಿರ ಹೋರಾಟದ ವಿಷಯವನ್ನು ಹಾಗೂ, ಹಿಂದೂ ಸಮಾಜದ ಮುಂದಿರುವ ಸವಾಲುಗಳು, ಮುಂದೆ ಎದುರಿಸಬೇಕಾದ ರೀತಿಯನ್ನು ವಿವರಿಸಿದರು. ವಿ. ಹಿಂ. ಪ. ತಾಲೂಕು ಕಾರ್ಯದರ್ಶಿ ಮೋಹನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ಮಡಂತ್ಯಾರು ಪಂಚಾಯತ್ ಅಧ್ಯಕ್ಷೆ ರೂಪಾ ಮತ್ತು ಸದಸ್ಯರು ಮತ್ತು ಪರಿವಾರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಕರಾಯ ವಿದ್ಯುತ್ ಫೀಡರುಗಳಲ್ಲಿ ನಾಳೆ (ಆ.8) ವಿದ್ಯುತ್ ನಿಲುಗಡೆ

Suddi Udaya

ಮರೋಡಿ: ಶಿವಪ್ಪ ಪೂಜಾರಿ ನಿಧನ

Suddi Udaya

ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆ: ಶಿಹಾನ್ ಅಬ್ದುಲ್ ರೆಹಮಾನ್ ರವರ ನೇತೃತ್ವದ ಉಜಿರೆ ಹಾಗೂ ಬೆಳ್ತಂಗಡಿ ಕರಾಟೆ ತರಬೇತಿ ಕೇಂದ್ರದ ಮಕ್ಕಳಿಗೆ ಹಲವು ಪ್ರಶಸ್ತಿ

Suddi Udaya

ವೇಣೂರು ಯುವವಾಹಿನಿ ಘಟಕದಿಂದ ಗುರುನಾರಾಯಣ ಜಯಂತಿಯ ಪ್ರಯುಕ್ತ ಗುರುನಮನ

Suddi Udaya

ಕೊಕ್ಕಡ: ಉಪ್ಪಾರಪಳಿಕೆ ಶಾಲಾ ವಾರ್ಷಿಕೋತ್ಸವ ಮತ್ತು ನೂತನ ಕೊಠಡಿಗಳ ಉದ್ಘಾಟನೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಕುಮಾರವ್ಯಾಸ ನಮನ, ಮುದ್ದಣ ಸ್ಮರಣೆ

Suddi Udaya
error: Content is protected !!