ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು, ನಡೆಸಿದ ಭರತನಾಟ್ಯ ಜೂನಿಯರ್ ಹಾಗೂ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ದೇವಿಕಿರಣ್ ಕಲಾನಿಕೇತನ ಮಡಂತ್ಯಾರು, ಗುರುವಾಯನಕೆರೆ ಮತ್ತು ಉಜಿರೆ ಶಾಖೆಗಳಿಂದ ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಉತ್ತಮ ಅಂಕ ಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ಇವರು ದೇವಿಕಿರಣ್ ಕಲಾನಿಕೇತನ ನೃತ್ಯ ನಿರ್ದೇಶಕಿಯರಾದ ಸ್ವಾತಿ ಜಯರಾಮ್ ಮತ್ತು ಪೃಥ್ವಿ ಸತೀಶ್‌ರವರ ಶಿಷ್ಯರಾಗಿದ್ದಾರೆ.
ಜೂನಿಯರ್ ವಿಭಾಗದಲ್ಲಿ ದಿಯಾ ಎಂ. ಕೋಟ್ಯಾನ್, ಆತ್ಮೀಯ ಕೆ., ಶಾರಿದಿ, ಸಾನ್ವಿ ಶೆಟ್ಟಿ, ಬ್ರಾಹ್ಮಿ, ಚಾರ್ವಿ ಮೋಹನ್, ಕೃತಿಕಾ ಪೈ, ತಸ್ವಿ.ಎಸ್., ಭುವಿಜ್ಞ ಶೆಟ್ಟಿ, ತನಿಷ್ಕ ಕೆ.ಕೆ., ಆಕಾಂಕ್ಷ ಎಲ್., ಅನುಷ್ಕಾ ಶೆಟ್ಟಿ., ಕೆ.ಸೃಷ್ಠಿ, ಶ್ರೇಷ್ಠ ಎಸ್., ನಿರೀಹಾ., ಶ್ರಾವ್ಯ., ದೀಪಿಕಾ ಪ್ರಕಾಶ್ ಮತ್ತು ವಿದ್ವತ್ ಪೂರ್ವ ವಿಭಾಗದಲ್ಲಿ ಮಾಧವಿ ಎಲ್.ಎಸ್., ಸಮೀಕ್ಷಾ, ಪ್ರಾರ್ಥನಾ ಎ.ಸಿ., ಪ್ರಾವಿಣ್ಯ ಎಂ.ಕೆ., ಯಶ್ವಿತ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾಗಿದ್ದಾರೆ.