ಮಿತ್ತಬಾಗಿಲು ಗ್ರಾಮ ಪಂಚಾಯತ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಜ.23 ರಂದು ಕೊಲ್ಲಿ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯಿತು.
ಈ ಸಂದರ್ಭ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಎನ್ ಮಾತನಾಡಿ ಸ್ವಚ್ಛತೆ ತಮ್ಮ ಮನೆಯಿಂದ ಪ್ರಾರಂಭವಾಗಬೇಕು. ಶಾಲಾ ಮಕ್ಕಳು ತಮ್ಮ ಮನೆಯಿಂದ ಒಣ ಕಸವನ್ನು ಶಾಲೆಗೆ ತರಲು ಒಂದು ದಿನ ನಿಗದಿ ಮಾಡಿ ಕಸ ವಿಲೇವಾರಿ ಮಾಡಲು ವಿನೂತನ ಪ್ರಯತ್ನ ಗ್ರಾಮ ಪಂಚಾಯತ್ ಮಾಡಿದೆ ಇದಕ್ಕೆ ಗ್ರಾಮಸ್ಥರೆಲ್ಲರ ಸಹಕಾರ ನೀಡಬೇಕು. ಎಲ್ಲಂದೆರೆಲ್ಲಿ ಕಸ ಎಸೆದು ಬೇರೆಯವರಿಗೆ ಸಮಸ್ಯೆ ತಂದೊಡ್ಡುವುದು ತಪ್ಪು.ಸ್ವಚ್ಛತೆ ಜೀವನದ್ದುದ್ದಕ್ಕು ಅಳವಡಿಸಬೇಕು. ಸ್ವಚ್ಛತೆ ಕಾಪಾಡಲು ನಿಮ್ಮ ಗ್ರಾಮ ಯಶಸ್ವಿಯಾಗಲಿ ಎಂದರು.
ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ ಚಂದ್ರ, ಕಾಜೂರು ದರ್ಗಾ ಸಮಿತಿಯ ಮಾಜಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಮುಸ್ಲಿಂ ಪಾದೆಗುತ್ತು, ಜೆ ಎಚ್ ಅಬ್ಬಾಸ್ ಕಾಜೂರು, ಎಸ್ ಕೆ ಡಿ ಆರ್ ಡಿ ಪಿ ಸೇವಾ ಪ್ರತಿನಿಧಿ ಶ್ರೀಮತಿ ರಶ್ಮಿ, ಶೌರ್ಯ ವಿಪತ್ತು ನಿರ್ವಹಣೆ ಸಮಿತಿ ಲೋಕೇಶ್ ಪೂಜಾರಿ, ಸುಜ್ಞಾನ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ವತ್ಸಲ, ಎಂಬಿಕೆ ಶ್ರೀಮತಿ ಸುಷ್ಮಾ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವಿಜಯ, ಸದಸ್ಯರುಗಳಾದ ರಾಮಣ್ಣ ಕುಂಬಾರ, ಚಂದ್ರಶೇಖರಗೌಡ, ಅಹಮದ್ ಕಬೀರ್, ಸಾಹುಲ್ ಹಮೀದ್, ಶ್ರೀಮತಿ ಮೋಹಿನಿ, ಶ್ರೀಮತಿ ಶಾಂಭವಿ , ಶ್ರೀಮತಿ ಚೇತನ, ರಿಕ್ಷಾ ಚಾಲಕರ ಸಂಘದ ಸುರೇಶ್ ಕುಕ್ಕಾವು, ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರುಗಳು, ಆರೋಗ್ಯ ಕಾರ್ಯಕರ್ತೆ, ಶ್ರೀಮತಿ ಜೀನಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ ಕೆ, ಗ್ರಾ. ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.