ವೇಣೂರು : ಗ್ರಾಮ ಪಂಚಾಯತು ವೇಣೂರು, ಮಹಾತ್ಮಗಾಂಧಿ ಪುಣ್ಯತಿಥಿಯ ಪ್ರಯುಕ್ತ ಕೆ. ಎಂ. ಸಿ. ಆಸ್ಪತ್ರೆ ಮಂಗಳೂರು ಇವರ ಮೂಲಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ವೇಣೂರು, ಯುವಸೇವಾ ಸಂಗಮ ಸೇವಾ ಟ್ರಸ್ಟ್ ವೇಣೂರು, ಸೇವಾ ಶರಧಿ ವಿಶ್ವಸ್ಥ ಮಂಡಳಿ ವೇಣೂರು, ಮಹಿಳಾ ಮಂಡಲ ವೇಣೂರು ಇವರ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ ಜ. 30 ರಂದು ಬೆಳಿಗ್ಗೆ ಗಂಟೆ 10-00ರಿಂದ ವೇಣೂರು ಶ್ರೀ ಭರತೇಶ ಸಭಾ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ನೆರವೇರಿಸಲಿದ್ದಾರೆ.