ಮಡಂತ್ಯಾರು: ಭಿಕ್ಷೆ ಬೇಡುವವನ ನೆಪದಲ್ಲಿ ಬಂದು ಜಿತೇಶ್ ಜೈನ್ ಮಾಲಕತ್ವದ ಪವರ್ ಹೌಸ್ ಅಂಗಡಿಯಿಂದ ಮೊಬೈಲ್ ಎಗರಿಸಿದ ಘಟನೆ ಜ 24 ರಂದು ನಡೆದಿದೆ.
ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಮೊಬೈಲ್ ಕದಿಯುವ ದೃಶ್ಯ ಸೆರೆಯಾಗಿದೆ. ಮೊಬೈಲ್ ಎಗರಿಸಿದ ತಕ್ಷಣ ಯಾರಿಗೂ ಕೂಡ ಅನುಮಾನ ಬಾರದ ರೀತಿಯಲ್ಲಿ ತನ್ನ ಜೇಬಿನಲ್ಲಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಅಂಗಡಿ ಮಾಲೀಕ ಜಿತೇಶ್ ಜೈನ್ ಅವರಿಗೆ ಮೊಬೈಲ್ ಕಳವಾದ ವಿಷಯ ತಿಳಿದು ಕೆಲವು ಮೊಬೈಲ್ ಅಂಗಡಿಗಳಿಗೆ ಪೋನ್ ಮೂಲಕ ವಿಷಯ ತಿಳಿಸಿದರು. ಬಳಿಕ ಮೊಬೈಲ್ ಬೆಳ್ತಂಗಡಿಯಲ್ಲಿ ಪತ್ತೆಯಾಗಿದೆ.
ಅಂಗಡಿ ಮಾಲೀಕರೇ ಎಚ್ಚರ, ಬೇಡುವ ನೆಪದಲ್ಲಿ ಬಂದು ಅಂಗಡಿಗಳಿಂದ ಬೆಲೆಬಾಳುವ ವಸ್ತುಗಳನ್ನು ಕಳವುಗೈದ ಹಲವಾರು ಪ್ರಕರಣಗಳು ಉಜಿರೆ-ಮಡಂತ್ಯಾರು- ಬೆಳ್ತಂಗಡಿಯಲ್ಲಿ ನಡೆದಿದೆ.