April 21, 2025
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಜ.29-ಫೆ.2 : ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ

ಶಿರ್ಲಾಲು: ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಜಾತ್ರೋತ್ಸವವು ಜ. 29 ರಿಂದ ಫೆ. 02 ರವರೆಗೆ ಪರ್ಯಂತ ವೇದಮೂರ್ತಿ ಬ್ರಹ್ಮಶ್ರೀ ನಡ್ಯಂತಾಡಿ ಶ್ರೀಪಾದ ಪಾಂಗಣ್ಣಾಯರ ಚಾರ್ಯತ್ವದಲ್ಲಿ ಜರಗಲಿರುವುದು.

ಜ.29 ಬೆಳಿಗ್ಗೆ ಗಂಟೆ 8-00ರಿಂದ ಪುಣ್ಯಾಹ ಕಲಶ, 25, 6 ತೆಂಗಿನಕಾಯಿ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ ಗಂಟೆ 4-00ಕ್ಕೆ ಧ್ವಜಾರೋಹಣ, ಉತ್ಸವ ಆರಂಭ, ಜ. 30 ಬೆಳಿಗ್ಗೆ ಗಂಟೆ 8-00ರಿಂದ ದೇವರಿಗೆ ನವಕ ಕಲಶ, ದೀಪದ ಬಲಿ, ನಾಗದೇವರಿಗೆ ಆಶ್ಲೇಷ ಬಲಿ, ನಿತ್ಯಬಲಿ, ಧ್ವಜಪೂಜೆ, ಮಹಾಪೂಜೆ, ಸಂಜೆ ಗಂಟೆ 4-0000 ದುರ್ಗಾಪೂಜೆ, ಉತ್ಸವ ಬಲಿ, ರಂಗಪೂಜೆ, ರಕ್ತೇಶ್ವರಿ ನೇಮ, ಮೈಸಂದಾಯ ನೇಮ, ಜ.31 ಬೆಳಿಗ್ಗೆ ಗಂಟೆ 8-00ರಿಂದ ನವಕ ಕಲಶ, ದೀಪದ ಬಲಿ, ನಿತ್ಯ ಬಿಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ, ಮಹಾಪೂಜೆ, ಸಾಯಂಕಾಲ ಗಂಟೆ 4-00ದಿಂದ ಸುತ್ತ ಬಲಿ, ರಂಗಪೂಜೆ, ಮಹಾಪೂಜೆ, ಕೊಡಮಣಿತ್ತಾಯ ನೇಮ, ಪಿಲಿಚಾಮುಂಡಿ ಉತ್ಸವ, ಫೆ.1 ರಂದು ಬೆಳಿಗ್ಗೆ ಗಂಟೆ 9-00ರಿಂದ ನವಕ ಕಲಶ, ಉತ್ಸವ ಬಲಿ, ಮಹಾಪೂಜೆ, ಸಂಜೆ ಗಂಟೆ 4-00ರಿಂದ ಮಹಾ ರಂಗಪೂಜೆ, ಉತ್ಸವ ಬಲಿ, ಮಹಾಪೂಜೆ, ಭೂತ ಬಲಿ, ಕವಾಟ ಬಂಧನ, ಫೆ.2 ಬೆಳಿಗ್ಗೆ ಕವಾಟೋದ್ಘಾಟನೆ, ದೇವರ ದಿವ್ಯದರ್ಶನ, ಶಯನ ಪ್ರಸಾದ, ಶನೈಶ್ಚರ ಪೂಜೆ, ಮಹಾಪೂಜೆ, ಸಂಜೆ ಗಂಟೆ 4-00ರಿಂದ ಯಾತ್ರಾ ಹೋಮ, ಭಜನಾ ಮಂಡಳಿ ವತಿಯಿಂದ ಭಜನಾ ಸೇವೆ, ಉತ್ಸವ ಬಲಿ ಅವಭ್ರತ ಸ್ನಾನ, ಮಹಾಪೂಜೆ, ಧ್ವಜ ಅವರೋಹಣ ಮತ್ತು ಅಂಗಣ ಪಂಜುರ್ಲಿ ನೇಮ, ಮಹಾ ರಂಗಪೂಜೆ, ಫೆ. 03 ಬೆಳಿಗ್ಗೆ ಗಂಟೆ 6-00ರಿಂದ ಸಂಪ್ರೋಕ್ಷಣೆ, ದೇವರಿಗೆ 25 ಕಲಶ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ:

ಜ.31ರಂದು ಸಾಯಂಕಾಲ ಗಂಟೆ 6-30ಕ್ಕೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿಮೊಗ್ರು ಮತ್ತು ಸ. ಉ. ಪ್ರಾ. ಶಾಲೆ, ಬಡಗಕಾರಂದೂರು, ಅಳದಂಗಡಿ ಇವರಿಂದ ಮನೋರಂಜನಾ (ಡ್ಯಾನ್ಸ್) ಕಾರ್ಯಕ್ರಮ, ಹಾಗೂ ಫೆ.02 ರಂದು ಸಂಜೆ ಗಂಟೆ 6-30ಕ್ಕೆ ಹುರುಂಬಿದೊಟ್ಟು ಅಂಗನವಾಡಿ ಮತ್ತು ಶಿರ್ಲಾಲು ಅಂಗನವಾಡಿ ಮಕ್ಕಳಿಂದ ಹಾಗೂ ಸ್ಥಳೀಯ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಮನೋರಂಜನಾ ಕಾರ್ಯಕ್ರಮ, ರಾತ್ರಿ ಗಂಟೆ 9-00ಕ್ಕೆ ಶ್ರೀ ಕೃಷ್ಣ ಕಲಾವಿದರು ಉಡುಪಿ ರಾಜ್ಯ ಪ್ರಶಸ್ತಿ ವಿಜೇತ ತಂಡ ಇವರು ಅಭಿನಯಿಸಲಿರುವ ನಾಟಕ “ಆನಿದ ಮನದಾನಿ” ನಡೆಯಲಿದೆ.

Related posts

ಚಾರ್ಮಾಡಿ: ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹೋಮಕುಂಡದ ಭೂಮಿ ಪೂಜೆ

Suddi Udaya

ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ವೈಭವ

Suddi Udaya

ಉಜಿರೆ: ಪದ್ಮಶ್ರೀ ಎಂಟರ್‌ಪ್ರೈಸಸ್‌ನ ದಿನಚರಿ ಪುಸ್ತಕ ಬಿಡುಗಡೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಬಹುಮಾನ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಕುಣಿತ ಭಜನಾ ತರಬೇತಿ ಉದ್ಘಾಟನೆ

Suddi Udaya

ಕಲ್ಮಂಜ ಪ್ರೌಢಶಾಲಾ ವಿದ್ಯಾರ್ಥಿಗಳು ಯೋಗಾಸನದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya
error: Content is protected !!