ಧರ್ಮಸ್ಥಳ: ಶ್ರೀ ಕ್ಷೇತ್ರ ಅರಮಲೆಬೆಟ್ಟ ಬ್ರಹ್ಮಕುಂಭಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ || ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹರ್ಷೇಂದ್ರ ಕುಮಾರ್ ರವರಿಗೆ ನೀಡಿ ಶ್ರೀ ಮಂಜುನಾಥ ದೇವರ ಹಾಗೂ ಖಾವಂದರ ಆಶೀರ್ವಾದ ಪಡೆದು ಬ್ರಹ್ಮಕುಂಭಾಭಿಷೇಕಕ್ಕೆ ಗೌರವಪೂರ್ವಕವಾಗಿ ಆಹ್ವಾನಿಸಲಾಯಿತು..
ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತದಾರ ಸುಖೇಶ್ ಕುಮಾರ್ ಕಡಂಬು, ಸುನಿಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.