ಬೆಳ್ತಂಗಡಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನ ಆವಿಷ್ಕಾರ ಸ್ಪರ್ಧೆಯ ಐದನೇ ಆವೃತ್ತಿಯನ್ನು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ರವರು ‘ಡೇರ್ ಟು ಡ್ರೀಮ್ 5.0’ ಪ್ರಾರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿರವರು ನೀಡಿದ ‘ಆತ್ಮನಿರ್ಭರ್ ಭಾರತ್’ ದ ದೃಷ್ಟಿಯನ್ನು ಸಾಕಾರಗೊಳಿಸಲು ದೇಶದಲ್ಲಿ ರಕ್ಷಣಾ ಮತ್ತು ಏರೋಸ್ಪೇಸ್ ತಂತ್ರಜ್ಞಾನಗಳಲ್ಲಿ ನಾವೀನ್ಯತೆಯ ಸ್ಪರ್ಧೆಯಾಗಿದ್ದು, ಸ್ಪರ್ಧೆಗೆ ಪಟ್ರಮೆಯ ದೀಪಕ್ ಎ.ಎಸ್. ರವರು ಜ.17 ರಂದು ಡೇರ್ ಟು ಡ್ರೀಮ್ 5.0′ Problem Vertical ಓಪನ್ ಚಾಲೆಂಜ್: ಯೋಚಿಸಲಾಗದ ಮತ್ತು ಊಹಿಸಲಾಗದದನ್ನು ಅನ್ವೇಷಿಸುವುದು ಎಂಬ ಸಮಸ್ಯೆ ಲಂಬ ದಲ್ಲಿ ನನ್ನ ವಿಶಿಷ್ಟ ಮತ್ತು ಉದಯೋನ್ಮುಖ ರಕ್ಷಣಾ ತಂತ್ರಜ್ಞಾನ ಯೋಜನೆಯನ್ನು ಯಶಸ್ವಿಯಾಗಿ ಸಲ್ಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ದೀಪಕ್ ರವರು ಡೇರ್ ಟು ಡ್ರೀಮ್ 5.0 ಆವಿಷ್ಕಾರ ಸ್ಪರ್ಧೆಗೆ ಭಾಗವಹಿಸುವುದು ನನ್ನ ಮಹತ್ವಕಾಂಕ್ಷೇ ಆಗಿತ್ತು. ದೇಶದ ರಕ್ಷಣಾ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಗಮನರ್ಹವಾಗಿ ದೇಶ ಸೇವೆ ಸಲ್ಲಿಸುವುದು ನನ್ನ ಜೀವನೋದ್ದೇಶದ ದೂರದೃಷ್ಟಿಯಾಗಿದೆ ಎಂದು ತಿಳಿಸಿದರು.
ಇವರು ಪಟ್ರಮೆಯ ಅಶ್ವತಡಿ ನಿವಾಸಿ ಸದಾಶಿವ ಹಾಗೂ ಮೋಹಿನಿ ದಂಪತಿಯ ಪುತ್ರ.