33.6 C
ಪುತ್ತೂರು, ಬೆಳ್ತಂಗಡಿ
April 30, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು ವಲಯದ ಬಂಟರ ಸಂಘದ ಕ್ರೀಡೋತ್ಸವ 2025

ಮಡಂತ್ಯಾರು : ಬಂಟರ ಸಂಘ ಮಡಂತ್ಯಾರು ವಲಯದ ವಲಯ ಬಂಟರ ಕ್ರೀಡೋತ್ಸವ 2025 ಜ.19 ರಂದು ಗರ್ಡಾಡಿ ಯುವಕ ಮಂಡಲದ ಕ್ರೀಡಾಂಗಣದಲ್ಲಿ ಜರಗಿತು.

ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ದಿವಾಕರ ಶೆಟ್ಟಿ ಕಂಗಿತ್ತಿಲು ವಹಿಸಿದರು. ಕಾರ್ಯಕ್ರಮವನ್ನು ಕಂಬಳ ಕ್ರೀಡೆಯಲ್ಲಿ ಹೆಸರುಮಾಡಿದ ಹಂಕಾರ್ಜಾಲು ಶ್ರೀನಿವಾಸ್ ಶೆಟ್ರ ಹಾಗೂ ವಲಯ ಗೌರವ ಅಧ್ಯಕ್ಷ ವಿಠ್ಠಲ ಶೆಟ್ಟಿ ಮೂಡಯೂರು ಅವರ ಅಮೃತ ಹಸ್ತದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ ಪೂಂಜ, ಶಶಿಧರ ಶೆಟ್ಟಿ ನವಶಕ್ತಿ, ಶ್ರೀಮತಿ ಜಯಲಕ್ಷ್ಮಿ ಎಂ ಸಾಮನಿ, ಶ್ರೀಮತಿ ನಳಿನಿ ಪೂಂಜಾ, ಶ್ರೀಮತಿ ಮೀನಾಕ್ಷಿ ಶೆಟ್ಟಿ, ಜಯರಾಮ ಶೆಟ್ಟಿ ಮುಂಡಾಡಿ ಗುತ್ತು, ರಾಜೇಶ್ ಶೆಟ್ಟಿ ನವಶಕ್ತಿ, ಅಜಿತ್ ಕುಮಾರ್ ಶೆಟ್ಟಿ ಕೊರಿಯರ್, ರಘುನಾಥ ರೈ, ಎಂ ಜಯರಾಮ ಭಂಡಾರಿ, ಸುರೇಶ್ ಶೆಟ್ಟಿ ಬೊಲ್ಲಜೆ, ರಾಜೇಶ್ ಶೆಟ್ಟಿ ಲಾಯಿಲ, ವಸಂತ ಶೆಟ್ಟಿ ಶ್ರದ್ದಾ ಪ್ರಿಂಟರ್ಸ್, ನವೀನ್ ಕೆ. ಸಾಮನಿ, ಪುಷ್ಪರಾಜ್ ಶೆಟ್ಟಿ ಭಾಗವಹಿಸಿದ್ದರು.

ವಲಯ ಕಾರ್ಯದರ್ಶಿಯಾದ ನಾರಾಯಣ ಶೆಟ್ಟಿ ನೆತ್ತರ ಪ್ರಾಸ್ತಾವಿಕವಾಗಿ ಮಾತಾಡಿ ಈ ಕ್ರೀಡಾಕೂಟದ ಉದ್ದೇಶ ಹಾಗೂ ಒಗ್ಗಟ್ಟಿನ ಬಗ್ಗೆ ತಿಳಿಸಿದರು. ದಿನ ಪೂರ್ತಿ ನಡೆದ ಅನೇಕ ಗ್ರಾಮೀಣ ಕ್ರೀಡೆಗಳ ಕ್ರೀಡೋತ್ಸವದಲ್ಲಿ ಬಂಟ ಮಕ್ಕಳು ಮಹಿಳೆಯರು ಸೇರಿದಂತೆ ಸುಮಾರು 1000 ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಕಾರ್ಯಕ್ರಮದ ಮೆರಗು ಹೆಚ್ಚಿಸಿತ್ತು.

ಸಂಜೆಯ ಸಮಾರೋಪದಲ್ಲಿ ಅಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡರುಗುಡ್ಡೆ ವಹಿಸಿದರು. ಸುಬ್ಬಯ ರೈ ಇಚ್ಲಂಪಾಡಿ ಅಧ್ಯಕ್ಷರು ಬಂಟರ ಯಾನೆ ನಾಡವರ ಸಂಘ ಕಾಸರಗೋಡು, ನಿತ್ಯಾನಂದ ಶೆಟ್ಟಿ ಉದ್ಯಮಿಗಳು, ಶ್ರೀಮತಿ ದಿವ್ಯಶೆಟ್ಟಿ ಗುಜ್ಜೋಟ್ಟು, ದಿವಾಕರ ಶೆಟ್ಟಿ ಕಂಗಿತ್ತಿಲು, ರಾಜಶೇಖರ ಶೆಟ್ಟಿ ಭಂದರಿಗುಡ್ಡೆ, ಶ್ರೀನಿವಾಸ ಶೆಟ್ಟಿ ಹಂಕರ್ಜಾಲು ಭಾಗವಹಿಸಿದ್ದರು.

ಚೇತನ್ ಮುಂಡಾಡಿ ಅವರನ್ನು ವಲಯ ಬಂಟ ಕಲಾ ರತ್ನ ಪ್ರಶಸ್ತಿ ಹಾಗೂ ಸುಶಾಂತ್ ಶೆಟ್ಟಿ ಅವರನ್ನು ವಲಯ ಬಂಟ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಗಳಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪದೆಂಜಿಲ , ಶಿವಶಂಕರ್ ಶೆಟ್ಟಿ ಮೂಡಾಯೂರು, ದಿವಾಕರ ಶೆಟ್ಟಿ ಹಂಕರ್ಜಾಳು ಸಹಕರಿಸಿದರು, ಕಾರ್ಯಕ್ರಮವನ್ನು ಸುರೇಶ್ ಶೆಟ್ಟಿ , ಭರತ್ ಶೆಟ್ಟಿ, ಯಶ್ವಂತ್ ಶೆಟ್ಟಿ ಹಾಗೂ ಸುಜಯ್ ಶೆಟ್ಟಿ ನಡೆಸಿಕೊಟ್ಟರು..

Related posts

ನಿಡ್ಲೆ: ಪಾರ್ಪಿಕಲ್ ಸಮೀಪ ಕಾರು ಮತ್ತು ಬೈಕ್ ಅಪಘಾತ

Suddi Udaya

ನೀರಿಗೆ ಇಳಿದಿದ್ದ ವೃದ್ದೆಯೋರ್ವರ ಶವ ಬೆಳಾಲು ಗ್ರಾಮದ ಅವೇಕೆ ಎಂಬಲ್ಲಿ ಪತ್ತೆ

Suddi Udaya

ಮೇ 3: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ

Suddi Udaya

ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ: ಗುರುವಾಯನಕೆರೆ ಪೇಟೆಯಲ್ಲಿ ಲ| ಹೇಮಂತ ರಾವ್ ಯರ್ಡೂರ್ ರಿಂದ ಚಹಾ ವಿತರಣೆ

Suddi Udaya

ಉಜಿರೆ: ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಗುಡ್ಡಗಾಡು ಓಟ

Suddi Udaya

ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೇಡಿ- ನಿಟ್ಟಡೆ ವತಿಯಿಂದ ಗುರುನಮನ ಕಾರ್ಯಕ್ರಮ

Suddi Udaya
error: Content is protected !!