ನಾಳ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಜ.24 ರಿಂದ ಪ್ರಾರಂಭಗೊಂಡು ಜ.30 ರವರೆಗೆ ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಬಾಲಕೃಷ್ಣ ಪಾಂಗಾಣ್ಣಾಯರವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ. ವೇ.ಮೂ.ರಾಘವೇಂದ್ರ ಅಸ್ರಣ್ಣ ಅವರ ನೇತೃತ್ವದಲ್ಲಿ ಧಾರ್ಮಿಕ, ವೈಧಿಕ,ವಿಧಿ-ವಿಧಾನಗಳೊಂದಿಗೆ ನಡೆಯಲಿದೆ.
ಜ.24 ರಂದು ಹಿರಿಯರಾದ ಬಿ.ವಿ.ಗುಂಡೂರಾವ್ ನಾಳ ದ್ವಜರೋಹಣ ಮಾಡಿದರು. ಭಕ್ತರಿಂದ ವಿಜೃಂಭಣೆಯೊಂದಿಗೆ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ದೇವರಿಗೆ ವಿಶೇಷ ಮಹಾಪೂಜೆ, ನಿತ್ಯ ಬಲಿ ಹಾಗೂ ಪಲ್ಲಪೂಜೆ ಜರುಗಿತು.
ದೇವಸ್ಥಾನದ ಆಡಳಿತಾಧಿಕಾರಿ ತಣ್ಣೀರುಪಂತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರವಣ್ ಕುಮಾರ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಎಂ., ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ನೂತನ ವ್ಯವಸ್ಥಾಪನಾ ಸಮಿತಿ ನಿಯೋಜಿತ ಅಧ್ಯಕ್ಷ ಹರೀಶ್ ಕುಮಾರ್ ಬಿ, ನಿಯೋಜಿತ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಶರತ್ ಶೆಟ್ಟಿ ಕೆ, ಹರೀಶ್ ಗೌಡ ಕೆ,ಮೋಹಿನಿ ಬಿ.ಗೌಡ, ರೀತಾ ಚಂದ್ರಶೇಖರ್, ರಾಘವ ಹೆಚ್, ನೀನಾ ಕುಮಾರ್, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಭುವನೇಶ್ ಜಿ.ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ವಸಂತ ಮಜಲು, ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ಜನಾರ್ದನ ಪೂಜಾರಿ, ಅಂಬಾ ಬಿ. ಅಳ್ವ, ದಿನೇಶ್ ಗೌಡ ಕೆ, ಉಮೇಶ್ ಕೇಲ್ದಡ್ಕ,ರಾಜೇಶ್ ಶೆಟ್ಟಿ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಎಸ್, ಕಾರ್ಯದರ್ಶಿ ಲೋಕೇಶ್ ಆಚಾರ್ಯ ಎನ್, ಶ್ರೀ ದುರ್ಗಾಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ, ಡಾ.ಅನಂತ್ ಭಟ್, ಕೂಸಪ್ಪ ಗೌಡ, ಆನಂದ ಶೆಟ್ಟಿ, ಲಿಂಗಪ್ಪ ಗೌಡ ದರ್ಖಾಸು, ಜಾತ್ರಾ ಮಹೋತ್ಸವ ಸಮಿತಿ ಸದಸ್ಯರಾದ ಸುರೇಶ್ ಅರ್.ಎನ್.ಸತೀಶ್ ಆರ್.ಎನ್, ಸತೀಶ್ ಭಂಡಾರಿ, ಸತೀಶ್ ಆಚಾರ್ಯ ಎನ್, ಚಂದಯ್ಯ ಶೆಟ್ಟಿ, ತುಕಾರಾಮ ಪೂಜಾರಿ, ಸದಾಶಿವ ನಾಯ್ಕ್ ,ಕೃಷ್ಣ ಕೆ. ಕುಂಟಿನಿ, ಸುಧಾಕರ ಮಜಲು, ವಸಂತ ಗೌಡ ಕೆ, ವಿಜಯ ಗೌಡ ಕೆ, ಜನಾರ್ಧನ ಗೌಡ ಕೆ, ಪೂವಪ್ಪ ಶೆಟ್ಟಿ,ಯೋಗೀಶ್ ಸುವರ್ಣ, ದೇವಸ್ಥಾನದ ಕಚೇರಿ ನಿರ್ವಾಹಕ ಗಿರೀಶ್ ಶೆಟ್ಟಿ ಜಿ.ಎಸ್. ಉಪಸ್ಥಿತರಿದ್ದರು. ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದರು.
ಹಸಿರು ಹೊರೆ ಕಾಣಿಕೆಯಲ್ಲಿ ವಿಶೇಷತೆ: ಮೂರೂವರೆ ಅಡಿ ಉದ್ದದ ಹಿಂಗಾರ,ಸೈನಿಕ ಬೇಬಿ ಗೌಡ ಪೇರಾಜೆ , ಅಕ್ಕಿ ಸಿರಿ ಮುಡಿ ವಸಂತ ಗೌಡ ಕಲಾಯಿತೊಟ್ಟು, ಗಣಪತಿಯನ್ನು ಹೋಲುವ ತೆಂಗಿನ ಕಾಯಿ, ಆನಂದ ಗೌಡ ಪಲ್ಲಾದೆ ಸಮರ್ಪಣೆ ಮಾಡಿದರು.