ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಜ.25 ರಂದು ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಬೆಳ್ತಂಗಡಿ,
ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಮೋಹಿನಿದ್ದೀನ್ ನವಾಜ್ ಎಂ.ಬಿ. ಬಿ.ಎಸ್ ಇವರು ಆಗಮಿಸಿ, ನಾವು ಆತ್ಮವಿಶ್ವಾಸ ಮತ್ತು ಒಗ್ಗಟ್ಟಿನಿಂದ ಕಳಂಕ ತಾರತಮ್ಯದ ವಿರುದ್ಧ ಹೋರಾಡಬೇಕೆಂದು ಮಾತನಾಡಿ, ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು. ಗಂಡಿಬಾಗಿಲು ಕಾರುಣ್ಯ ಸಂಘ, ಸಂಜಯ ನಗರದ ದೇವಿ ಸಂಘ ಮತ್ತು ನಂದಾದೀಪ ಸ್ವಸಹಾಯ ಸಂಘದ ಸದಸ್ಯರ ನೇತೃತ್ವದಲ್ಲಿ ಪೌಷ್ಟಿಕ ಆಹಾರದ ಕಿಟ್ ವಿತರಿಸಿ, ರೂ.14000/- ವನ್ನು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮಕ್ಕೆ ನೀಡಿದರು.
ಸ್ವಸಹಾಯ ಸಂಘ ಸದಸ್ಯೆ ಶ್ರೀಮತಿ ಮೇರಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶ್ರೀಮತಿ ಹರಿಣಾಕ್ಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ.ಇವರು
ಪ್ರಾಸ್ತವಿಕ ನುಡಿಯನ್ನಾಡಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ನಂದಾದೀಪ ಸ್ವಸಹಾಯ ಸಂಘದ ಪ್ರತಿನಿಧಿಯಾಗಿ ಶ್ರೀಮತಿ ಮಂಜುಳಾ ಜೋನ್ ಇವರು ಮತ್ತು ದೇವಿ ಸಂಘದ ಪ್ರತಿನಿಧಿಯಾಗಿ ಶ್ರೀಮತಿ ವೈಶಾಲಿ ಉಪಸ್ಥಿತರಿದ್ದರು. ನವಜೀವನ ಆರೈಕೆ ಬೆಂಬಲ ಕಾರ್ಯಕ್ರಮದ ಸದಸ್ಯರು ಹಾಡು ಹಾಡಿದರು. ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಶ್ರೀಮತಿ ಪುಷ್ಪ ರವರು ಪ್ರಾರ್ಥನೆ ಹಾಡಿದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ವಿದ್ಯಾನಿಧಿ ಸಂಯೋಜಕಿ ಶ್ರೀಮತಿ ರವರು ಸ್ವಾಗತಿಸಿದರು. ಕಾರ್ಯಕರ್ತರು ಜೋನ್ಸನ್ ವಂದಿಸಿದರು.
ಕಾರ್ಯಕರ್ತರು ಮಾರ್ಕ್ ಡಿ ಸೋಜ ರವರು ಕಾರ್ಯಕ್ರಮ ನಿರೂಪಿಸಿದರು. ಗಂಡಿಬಾಗಿಲು ಕಾರುಣ್ಯ ಸ್ವಸಹಾಯ ಸಂಘದ ಸದಸ್ಯರು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮದ ಸದಸ್ಯರಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು.