30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಸೌಖ್ಯವನ ಪರೀಕದ ಬ್ರಹ್ಮಕಲಶೋತ್ಸವದ ಕಛೇರಿ ಉದ್ಘಾಟನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತದಲ್ಲಿರುವ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷರಾಗಿರುವ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಸೌಖ್ಯವನ ಪರೀಕದಲ್ಲಿ ಮಾರ್ಚ್ 3ರಿಂದ 7ರವರೆಗೆ ಜರಗಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕಾರ್ಯಾಲಯವು ಜ.22ರಂದು ಶ್ರೀ ಶ್ರೀನಿವಾಸ ಮತ್ತು ಶ್ರೀ ಮಂಜುನಾಥ ದೇವರ ಪ್ರಸಾದ ಹಾಕಿ ದೀಪ ಬೆಳಗಿಸುವುದರ ಮುಖೇನ ಚಾಲನೆಗೊಳಿಸಲಾಯಿತು.

ಡಿ ಹರ್ಷೇಂದ್ರ ಕುಮಾರ್‌ರವರ ಮಾರ್ಗದರ್ಶನದಲ್ಲಿ ಜರಗಲಿರುವ ಬ್ರಹ್ಮಕಲಶೋತ್ಸವದ ಎಲ್ಲಾ ಕಾರ್ಯಚಟುವಟಿಕೆಗಳ ಬಗ್ಗೆ ವ್ಯವಸ್ಥಿತವಾದ ಕಾರ್ಯಾಲಯವನ್ನು ಶಾಂತಿವನ ಟ್ರಸ್ಟ್ ಧರ್ಮಸ್ಥಳದ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ತಾಡಿತ್ತಾಯ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತ್ಯಾನಂದ ನಾಯಕ್, ಸೋಮನಾಥ ಶೆಟ್ಟಿ ಪರೀಕ ಅರಮನೆ, ನಂದಕುಮಾರ್ ಉಡುಪಿ, ಕ್ಷೇತ್ರದಿಂದ ಲೆಕ್ಕಾಧಿಕಾರಿಯಾಗಿ ನೇಮಕವಾಗಿರುವ ರಾಜೇಶ್ ಜೈನ್, ಶ್ರೀ ವಜ್ರನಾಭಯ್ಯ, ಅಕೌಂಟ್ಸ್ ಆಫೀಸಿನ ವಿಶ್ವನಾಥ, ಸೌಖ್ಯವನ ಪರೀಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ| ಗೋಪಾಲ ಪೂಜಾರಿ, ಡಾ| ಶೋಭಿತ್ ಶೆಟ್ಟಿ, ಡಾ| ಪೂಜಾ ಜಿ ಹಾಗೂ ಆಡಳಿತ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸೌಖ್ಯವನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಬ್ರಹ್ಮಕಲಶದ ಪ್ರಸ್ತಾವಿಕ ಮಾತುಗಳನ್ನಾಡಿ ಕಾರ್ಯಾಲಯದ ಮಹತ್ವವನ್ನು ತಿಳಿಸಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಜಿಲ್ಲಾಮಟ್ಟದ ಬಾಲಕ – ಬಾಲಕಿಯರ ಕಬಡ್ಡಿ ಪಂದ್ಯಾಟ

Suddi Udaya

ಅಕ್ರಮವಾಗಿ ಮದ್ಯ ಮಾರಾಟ: ವೇಣೂರು ಪೊಲೀಸರಿಂದ ದಾಳಿ

Suddi Udaya

ಅನುಗ್ರಹ ಆಂ.ಮಾ. ಶಾಲೆಯಲ್ಲಿ ದೀಪ ಪ್ರದಾನ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧ.ಮಂ. ಅ. ಸೆಕೆಂಡರಿ ಶಾಲೆಯಲ್ಲಿ ಸಂಭ್ರಮದ ‘ಪ್ರಾರಂಭೋತ್ಸವ’

Suddi Udaya

ಸುಳ್ಯ ,ಕಡಬ, ಪುತ್ತೂರು ತಾಲೂಕಿನಲ್ಲಿ ಶೂನ್ಯ ಬಂಡವಾಳದಲ್ಲಿ ಉದ್ಯಮ ನಡೆಸಲು ಚಿಂತನೆ” ಮೋಹನ್ ಗೌಡ. ಬಿ. ಎ

Suddi Udaya

ಸಾರ್ವಜನಿಕರಿಗಾಗಿ CPR ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

Suddi Udaya
error: Content is protected !!