23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೌತಡ್ಕ ದೇವಾಲಯಗಳಲ್ಲಿ ಕಾನೂನು ಬಾಹಿರವಾಗಿ ಮತ್ತು ಭಕ್ತಾದಿಗಳ ನಂಬಿಕೆಗೆ ವಿರುದ್ಧವಾಗಿ ನಡೆಸಿರುವ ಅವ್ಯವಹಾರದ ಕುರಿತು ಪ್ರಶಾಂತ್ ಪೂವಾಜೆ ಯವರಿಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಸೌತಡ್ಕ ದೇವಾಲಯಗಳಲ್ಲಿ ಇತ್ತೀಚೆಗೆ ರಚಿಸಿರುವ “ಸೌತಡ್ಕ ಸಂರಕ್ಷಣಾ ವೇದಿಕೆ” ಯ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಬರಾಯ ಎಂಬವರು ಈ ಹಿಂದೆ ಮಾಡಿರುವ ಹಿಂದೂ ಧಾರ್ಮಿಕ ಇಲಾಖೆಯ ದೇವಾಲಯಗಳಲ್ಲಿ ಕಾನೂನು ಬಾಹಿರವಾಗಿ ಮತ್ತು ಭಕ್ತಾದಿಗಳ ನಂಬಿಕೆಗೆ ವಿರುದ್ಧವಾಗಿ ನಡೆಸಿರುವ ಅವ್ಯವಹಾರದ ಕುರಿತು ಪ್ರಶಾಂತ್ ಪೂವಾಜೆ ತಿಳಿಸಿದರು.

ಅವರು ಜ.25 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಇತ್ತೀಚೆಗೆ ರಚಿಸಲಾಗಿರುವ ಸೌತಡ್ಕ ಸಂರಕ್ಷಣಾ ವೇದಿಕೆ” ಎಂಬ ಹೆಸರಿನಲ್ಲಿ ಸೌತಡ್ಕ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಇತರ 4 ಮಂದಿ ಸದಸ್ಯರು ನೂತನ ವ್ಯವಸ್ಥಾಪನಾ ಸಮಿತಿಗೆ ಈಗಾಗಲೇ ಅರ್ಜಿಯನ್ನು ಸಲ್ಲಿಸಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯಾದ ಮಾಹಿತಿಯನ್ನು ಪಡಕೊಂಡಿದ್ದು ಇವರುಗಳನ್ನು ಸೌತಡ್ಕ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಮರು ಆಯ್ಕೆ ಮಾಡದಂತೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಅಧ್ಯಕ್ಷರಾದ ಮಾನ್ಯ ದತ್ತಿ ಇಲಾಖಾ ಸಚಿವರಿಗೆ ಮತ್ತು ಆಯುಕ್ತರೊಂದಿಗೆ 8 ಮಂದಿ ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯರುಗಳಿಗೆ ಲಿಖಿತ ದೂರುಗಳನ್ನು ನೀಡಿರುತ್ತೇವೆ.

ಸೌತಡ್ಕ ದೇವಾಲಯದಲ್ಲಿ ಕಾನೂನು ಬಾಹಿರವಾಗಿ ಮತ್ತು ದತ್ತಿ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ನಡೆಸಿರುವ ಭಕ್ತಾದಿಗಳು ದೇವರಿಗೆ ಸಮರ್ಪಿಸಿರುವ ಹರಕೆ ಗಂಟೆಗಳ ಹರಾಜಿನ ಅವ್ಯವಹಾರ ಮತ್ತು ಸುಧೀರ್ಘ 19 ವರ್ಷ ದೇವಳದ ಸಮಿತಿಯಲ್ಲಿ ಸದಸ್ಯರಾಗಿದ್ದು ದೇವಳದ ಪ್ರತಿ ಹುಂಡಿ ಎಣಿಕೆ ಮಾಡುವ ಸಮಯದಲ್ಲಿ ಸ್ವಲ್ಪ ಸ್ವಲ್ಪ ಹಣ ತೆಗೆದಿರಿಸಿ ಆಸ್ತಿ ಖರೀದಿಯ ಸಾಲವನ್ನು ಮರು ಪಾವತಿ ಮಾಡಿರುವ ವಿಶ್ವನಾಥ ಪೂಜಾರಿ ಇವರ ಪತ್ರಿಕಾ ಹೇಳಿಕೆಯ ಅವ್ಯವಹಾರದ ಮರು ತನಿಖೆಯನ್ನು ನಡೆಸುವಂತೆ ಈ ಹಿಂದೆ ಮನವಿಯನ್ನು ಸಲ್ಲಿಸಿರುತ್ತೇವೆ.

2017 ರಿಂದ 2020 ನೇ ಸಾಲಿನ ವ್ಯವಸ್ಥಾಪನಾ ಸಮಿತಿಯು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ದೇಗುಲದ ಶ್ರೀ ಗಣೇಶ ಕಲಾ ಮಂದಿರದ ಬಲ ಭಾಗದಲ್ಲಿದ್ದ ಹಣ್ಣು ಕಾಯಿಯೊಂದಿಗೆ ಗಂಟೆ ಅಂಗಡಿ, ಮತ್ತು ಕ್ಷೇತ್ರದ ಪ್ರಸಿದ್ದ ಪ್ರಸಾದವಾದ ಅವಲಕ್ಕಿ ಪಂಚಕಜ್ಜಾಯ ತಯಾರಿ ಟೆಂಡರ್ ವ್ಯವಸ್ಥೆಯಲ್ಲಿ ಮತ್ತು ಸಿ. ಸಿ. ಕ್ಯಾಮರಾ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ಅವ್ಯವಹಾರ ನಡೆಸಿ, ದೇಗುಲದ ವ್ಯವಸ್ಥೆಗೆ ನಷ್ಟ ಉಂಟುಮಾಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಠಲ ಕುರ್ಲೆ ಹಾಗೂ ಪುರಂದರ ಕಡೀರ ಉಪಸ್ಥಿತರಿದ್ದರು.

Related posts

ಬ್ಲಾಕ್ ಜಾಕ್ ಪ್ರೊಡಕ್ಟ್ ಪಿಚ್ಚಿಂಗ್ ಸ್ಪರ್ಧೆ: ವಾಣಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

Suddi Udaya

ಉಜಿರೆ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಪೋಸ್ಟರ್ ತಯಾರಿಕಾ ಕಾರ್ಯಾಗಾರ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರಿಗೆ ‘ಫೋನೆಟಿಕ್ಸ್ ಇನ್ ಆಕ್ಷನ್: ಎಂಗೇಜಿಂಗ್ ಯಂಗ್ ಮೈಂಡ್ಸ್’ ಕಾರ್ಯಾಗಾರ

Suddi Udaya

ಫೆ.13-17 ಚಾರ್ಮಾಡಿ ಶ್ರೀಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಮತ್ತು ಆರಾಟ್ ಉತ್ಸವ

Suddi Udaya

ಕಳೆಂಜ ಅರಣ್ಯ ಇಲಾಖೆ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮನೆ ನಿರ್ಮಾಣ: ಅಕ್ರಮ ಪ್ರವೇಶ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ: 11 ಜನರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಪಿಯುಸಿ ಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದ ಆಕರ್ಶ್ ಪಿಎಸ್ ಗೆ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ

Suddi Udaya
error: Content is protected !!