ಬಂಗಾಡಿ: ಇಂದುಬೆಟ್ಟು ಗ್ರಾಮದ ಶ್ರೀ ಬಂಗಾಡಿ ಹಾಡಿ ದೈವ ದೈವಸ್ಥಾನ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಿ.ಎಸ್ ಮುಕುಂದ ಸುವರ್ಣ ಬೆದ್ರಬೆಟ್ಟು ಇವರು ನೇಮಕಗೊಂಡಿದ್ದಾರೆ.
ದ.ಕ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯು ಬಂಗಾಡಿ ಶ್ರೀ ಹಾಡಿದೈವ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ನೇಮಕಗೊಳಿಸಿ ಆದೇಶ ನೀಡಿದ್ದು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮುಕುಂದ ಸುವರ್ಣ ಅವರು ನೇಮಕಗೊಂಡಿದ್ದಾರೆ.
ಇವರು ಬೆಳ್ತಂಗಡಿ ಭೂ ನ್ಯಾಯಮಂಡಳಿಯ ಸದಸ್ಯರಾಗಿ, ಬೆಳ್ತಂಗಡಿ ತಾಲೂಕು ಪಂಚಾಯತದ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಮಿತಿಯ ಸದಸ್ಯರಾಗಿ ರವಿ ನೇತ್ರಾವತಿ ನಗರ ಇಂದಬೆಟ್ಟು, ಶ್ರೀಮತಿ ರೋಹಿಣಿ ಧರ್ಣಪ್ಪ ಪೂಜಾರಿ, ಕೊಪ್ಪದ ಕೋಡಿ ಇಂದಬೆಟ್ಟು, ಶ್ರೀಮತಿ ಚಂದ್ರಾವತಿ ಕುಶಾಲಪ್ಪ, ಕಾರಿಂಜ ಮನೆ ನಾವೂರು, ಸುರೇಶ್ ಪರಾರಿ ಮನೆ ನಾವೂರು, ಗಣೇಶ್ ಪ್ರಸಾದ್.ಡಿ ತಾರಕೂಟೇಲು ಇಂದಬೆಟ್ಟು, ದೇಜಪ್ಪ ಗೌಡ ಕುಂಡಡ್ಕ ಮನೆ ನಾವೂರು. ಎಚ್. ರಾಮಕೃಷ್ಣ ಗೌಡ ಹಣಿಬೆಟ್ಟು ಮನೆ ಇಂದಬೆಟ್ಟು ಹಾಗೂ ಪ್ರಧಾನ ಅರ್ಚಕರು ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.