22.5 C
ಪುತ್ತೂರು, ಬೆಳ್ತಂಗಡಿ
January 27, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಾಸನದ ಆಟೋಚಾಲಕನ ಕೊಲೆ ಮಾಡಿ ಶಿರಾಡಿ ಘಾಟ್ ನಲ್ಲಿ ಶವ ಬಿಸಾಕಿದ ಹಂತಕರು: ಧರ್ಮಸ್ಥಳ ನೇತ್ರಾವತಿ‌ ನದಿಯಲ್ಲಿ ಬಟ್ಟೆಗಳನ್ನು ಎಸೆದು ಪರಾರಿ

ಬೆಳ್ತಂಗಡಿ: ಆಟೋ ಚಾಲಕನನ್ನು ತನ್ನ ಮೂವರು ಸ್ನೇಹಿತರು ಸೇರಿ ಹಲ್ಲೆ ನಡೆಸಿ ಕೊಲೆ‌ ಮಾಡಿ ಬಳಿಕ ಶವವನ್ನು ಕಾರಿನಲ್ಲಿ ಹಾಕಿ ಶಿರಾಡಿ ಘಾಟ್ ನಲ್ಲಿ ಬೆತ್ತಲೆ ಮಾಡಿ ಶವ ಎಸೆದು ಸಾಕ್ಷ್ಯ ನಾಶ ಮಾಡಲು ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ಮೂವರು ಹಂತಕರು ಕೊಲೆಗೆ ಬಳಸಿದ ಬಟ್ಟೆಗಳನ್ನು ಎಸೆದು ಸ್ನಾನ ಮಾಡಿ ಪರಾರಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಒರ್ವ ಆರೋಪಿಯನ್ನು ಹಾಸನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಸನ ತಾಲೂಕಿನ ಹರಳಹಳ್ಳಿ ಗ್ರಾಮದ ಆಟೋಚಾಲಕ ಶಿವಕುಮಾರ್ (36) ಎಂಬಾತನು ಸ್ನೇಹಿತರಾದ ಶರತ್, ಪ್ರದೀಪ್, ದಿಲೀಪ್ ಎಂಬವರು ಸೇರಿಕೊಂಡು ಜ.10 ರಂದು ಪಾರ್ಟಿಗೆಂದು ಬೇಲೂರು ರಸ್ತೆಯ ಕುಪ್ಪಳ್ಳಿ ಬಳಿ ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಹತ್ಯೆ ಮಾಡಿ ಬಳಿಕ ಶಿರಾಡಿ ಘಾಟ್ ನಲ್ಲಿ ಬೆತ್ತಲೆ ಮಾಡಿ ಶವ ಎಸೆದಿದ್ದರು.

ಶವ ಎಸೆದು ಮೂವರು ಆರೋಪಿಗಳು ಕಾರಿನಲ್ಲಿ ನೇರ ಧರ್ಮಸ್ಥಳದ ನೇತ್ರಾವತಿ ನದಿಗೆ ಬಂದು ಹತ್ಯೆಯ ವೇಳೆ ಬಳಸಿದ ಬಟ್ಟೆಗಳನ್ನು ಬಿಸಾಕಿ ಸ್ನಾನ ಮಾಡಿ ಪರಾರಿಯಾಗಿದ್ದರು. ಈ ನಡುವೆ ಆರೋಪಿ ದಿಲೀಪ್ ಎಂಬಾತ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶಿವಕುಮಾರ್ ಹಲ್ಲೆ ಮಾಡಿ ಕೊಲೆ ಮಾಡುವಾಗ ನಾನು ಇದ್ದೆ ಅಲ್ಲಿ ಇಬ್ಬರು ನನಗೂ ಹಲ್ಲೆ ಮಾಡಿದ್ದಾರೆ ಈ ವೇಳೆ ನಾನು ತಪ್ಪಿಸಿಕೊಂಡು ಬಂದಿರುವುದಾಗಿ ನಾಟಕವಾಡಿದ್ದ.ಪೊಲೀಸರ ವಿಚಾರಣೆಯಲ್ಲಿ ಈತನು ಕೊಲೆಯಲ್ಲಿ ಭಾಗಿಯಾಗಿರುವ ರಹಸ್ಯ ಬಾಯಿಬಿಟ್ಟಿದ್ದಾನೆ.ಈತನನ್ನು ವಶಕ್ಕೆ ಪಡೆದು ವಿಚಾರ ಬಳಿಕ ಶವ ಬಿಸಾಕಿದ ಜಾಗ ಮತ್ತು ಬಟ್ಟೆಗಳನ್ನು ನೇತ್ರಾವತಿ ನದಿಯಲ್ಲಿ ಬಿಸಾಕಿದ್ದನ್ನು ತಿಳಿಸಿದ್ದಾನೆ.

ಹಾಸನ ಗ್ರಾಮಾಂತರ ಪೊಲೀಸರು ದಿಲೀಪ್ ನನ್ನು ಬಂಧಿಸಿ ಕೊಲೆಯಾದ ಶಿವಕುಮಾರ್ ಶವವನ್ನು ಬಿಸಾಕಿದ ಶಿರಾಡಿ ಘಾಟ್ ಪ್ರದೇಶವನ್ನು ದಿಲೀಪ್ ತೋರಿಸಿಕೊಟ್ಟಿದ್ದು ಬಳಿಕ ಧರ್ಮಸ್ಥಳದ ನೇತ್ರಾವತಿ ನದಿ ಬಳಿ ಮೂವರು ಆರೋಪಿಗಳ ಬಟ್ಟೆಯನ್ನು ತೋರಿಸಿಕೊಟ್ಟಿದ್ದಾನೆ ಅದರಂತೆ ಜ.21 ರಂದು ಸಂಜೆ ಮಂಗಳೂರು ಎಫ್.ಎಸ್.ಎಲ್ ವಿಭಾಗದ ಸೋಕೋ ತಂಡದ ಅರ್ಪಿತಾ, ಕಾವ್ಯ ಶ್ರೀ, ಸುಮನ್ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮಹಜರ್ ಮಾಡಿದ್ದಾರೆ.

ಶರತ್ ಮತ್ತು ಪ್ರದೀಪ್ ಇಬ್ಬರು ಸೇರಿ ಮಾಡಿದ ಯಾವುದೋ ಒಂದು ಕಳ್ಳತನ ಪ್ರಕರಣದ ಬಗ್ಗೆ ಶಿವಕುಮಾರ್ ಗೆ ಗೊತ್ತಿತ್ತು. ಈ ವಿಚಾರ ಎಲ್ಲಿ ಪೊಲೀಸರಿಗೆ ಹೇಳುತ್ತಾನೆ ಎಂಬ ಭಯದಲ್ಲಿ ಪಾರ್ಟಿ ಮಾಡುವ ನೆಪದಲ್ಲಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಪೊಲೀಸರಿಗೆ ತಿಳಿದಿದೆ.

ದಿಲೀಪ್ ತಾನು ಬಂಧನವಾಗುವ ಭಯದಲ್ಲಿ ನಾಟಕ ಮಾಡಲು ಪೊಲೀಸ್ ಠಾಣೆಗೆ ಹೋದಾವ ಸತ್ಯ ಹೇಳಿ ಜೈಲು ಸೇರಿದ್ದು ಇನ್ನೂ ಉಳಿದ ಪ್ರಮುಖ ಇಬ್ಬರು ಆರೋಪಿಗಳಾದ ಪ್ರದೀಪ್ ಶರತ್ ಪರಾರಿಯಾಗಿದ್ದು ಅವರಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

Related posts

ಮಿತ್ತಬಾಗಿಲು: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಮಾರಾಕಾಸ್ತ್ರದಿಂದ ಹಲ್ಲೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೃಢಕಲಶಾಭಿಷೇಕ ಹಾಗೂ ಚಂಡಿಕಾಯಾಗ

Suddi Udaya

ಬೆಳ್ತಂಗಡಿ ಹಳೆಕೋಟೆ ಸಮೀಪ ಧರೆಗುರುಳಿದ ಬೃಹತ್ ಮರ

Suddi Udaya

ಪಿಲ್ಯ: ನಿನ್ನಿಕಲ್ಲಿನಲ್ಲಿ ಅಡಿಕೆ ತೋಟದಲ್ಲಿ ಅಕ್ರಮ ಮಾರಾಟಕ್ಕೆ ದಾಸ್ತಾನು ಇರಿಸಲಾಗಿದ್ದಮದ್ಯ ಪತ್ತೆ, ಅಬಕಾರಿ ಇಲಾಖೆಯಿಂದ ದಾಳಿ, ಸೊತ್ತುಗಳು ವಶಕ್ಕೆ

Suddi Udaya

ಶಿಬಾಜೆ: ನಾಪತ್ತೆಯಾಗಿದ್ದ ಐಂಗುಡ ನಿವಾಸಿ ವಾಸು ರಾಣ್ಯ ಪತ್ತೆ

Suddi Udaya

ನಿಡ್ಲೆ ಗ್ರಾ.ಪಂ. ಮಾಜಿ ಸದಸ್ಯ ಚಂದ್ರಶೇಖರ್ ನಿಧನ

Suddi Udaya
error: Content is protected !!