23 C
ಪುತ್ತೂರು, ಬೆಳ್ತಂಗಡಿ
April 17, 2025
Uncategorized

ಕಾಜೂರು ಮಖಾಂ ಉರೂಸ್‌ಗೆ ಸಂಭ್ರಮದ ಚಾಲನೆ: ಆಧ್ಯಾತ್ಮಿಕ ಚೌಕಟ್ಟು ಮೀರಿ ಬದುಕುವವರಿಂದ ಸಮಾಜಕ್ಕೆ ಅಪಾಯ: ಕಾಜೂರು ತಂಙಳ್

ಬೆಳ್ತಂಗಡಿ: ಧರ್ಮ ಮತ್ತು ಆಧ್ಯಾತ್ಮಿಕತೆ ಒಳಗೊಂಡಿರುವ ಬದುಕು ಸೌಹಾರ್ದತೆಯ ನಾಡಿಗೆ ಪ್ರೇರಣೆ. ಹಿಂದೂ ಕ್ರೈಸ್ತ ಮುಸಲ್ಮಾನ ಜೈನ್ ಬೌದ್ದ ಯಾವುದೇ ಧರ್ಮವಿರಲಿ ಅದರ ಆಚಾರ್ಯರು, ಮುನಿಗಳು ಮತ ಪಂಡಿತರು ಕಲಿಸಿಕೊಡುವ ಮೂಲತತ್ವ ಕಲಿಯದೆ ಸ್ವತಂತ್ರವಾಗಿ ಬದುಕಲು ಆರಂಭಿಸಿದ್ದರಿಂದಲೇ ಇಲ್ಲಿ ಸಂಘರ್ಷಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಧರ್ಮದ ತಿರುಳನ್ನು, ಧರ್ಮ ವಿಜ್ಞಾನವನ್ನು ತಮ್ಮ ಅನುಯಾಯಿಗಳಿಗೆ ಕಲಿಸಿಕೊಡಬೇಕಾದುದು ಧರ್ಮಶ್ರೇಷ್ಠರುಗಳ ಜವಾಬ್ಧಾರಿಯಾಗಿದೆ. ಹಾಗಿದ್ದರೆ ಮಾತ್ರ ಸುಂದರ ಭಾರತ ನೋಡಲು ಸಾಧ್ಯ ಎಂದು ಸಯ್ಯಿದ್ ಕಾಜೂರು ತಂಙಳ್ ಹೇಳಿದರು.

ಕಾಜೂರು ಮಖಾಂ ಶರೀಫ್ ನಲ್ಲಿ ಆರಂಭಗೊಂಡ 2025 ನೇ ಉರೂಸ್ ಸಂಭ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು.

ತಾಜುಲ್ ಉಲಮಾ ಅವರ ಪುತ್ರ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಅಧ್ಯಕ್ಷತೆ ವಹಿಸಿದ್ದು ದುಆ ನೆರವೇರಿಸಿದರು.

ಆರಂಭಿಕ ಶುಭ ನುಡಿ ನೀಡಿದ ಸಯ್ಯಿದ್ ಸಾದಾತ್ ತಂಙಳ್, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಶೈಕ್ಷಣಿಕ ಪ್ರಗತಿಯ ಮೂಲಕ ಪರಿವರ್ತನೆ ಗೊಳ್ಳುತ್ತಿರುವ ಕಾಜೂರನ್ನು ನೋಡಲು ಹೆಮ್ಮೆಯಾಗುತ್ತಿದೆ. ಪೂರ್ವ ವಿದ್ವಾಂಸರು ತೋರಿದ ಆದರ್ಶವನ್ನು ಪಾಲಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದರು.

ಸಯ್ಯಿದ್ ಕಾಜೂರು‌ ತಂಙಳ್ ವಕ್ಫ್‌ಜಿಲ್ಲಾ ಉಪಾಧ್ಯಕ್ಷ ಫಕೀರಬ್ಬ ಮರೋಡಿ, ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಪಿಡಿಒ ಮೋಹನ ಬಂಗೇರ, ಅನಿವಾಸಿ ಭಾರತೀಯರ ಅಂತಾರಾಷ್ಟ್ರೀಯ ಸಂಘಟನೆ ಕೆಸಿಎಫ್ ಇದರ ಇಹ್ಸಾನ್ ವಿಭಾಗದ ಚೇರ್ಮೆನ್ ಕೆ.ಎಮ್ ಇಕ್ಬಾಲ್ ಕಾಜೂರು, ಖ್ಯಾತ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಸಂದರ್ಭೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ, ಕೋಶಾಧಿಕಾರಿ‌ ಕೆ.ಎಮ್ ಕಮಾಲ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್, ಕಾಜೂರು ಉಪಾಧ್ಯಕ್ಷ ಬದ್ರುದ್ದೀನ್, ಕಿಲ್ಲೂರು‌ ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆಮನೆ, ರಾಜ್ಯ ಉಲಮಾ ಒಕ್ಕೂಟದ ಸದಸ್ಯ ಕೆ.ಯು ಉಮರ್ ಸಖಾಫಿ, ಕಾಜೂರು‌ ಮಾಜಿ ಅಧ್ಯಕ್ಷರುಗಳಾದ ಕೆ ಶೇಖಬ್ಬ ಕುಕ್ಕಾವು, ಬಿ.ಎ ಯೂಸುಫ್ ಶರೀಫ್, ಹಾಜಿ ಇಬ್ರಾಹಿಂ ಮದನಿ, ಮಿತ್ತಬಾಗಿಲು ಗ್ರಾ.ಪಂ ಸದಸ್ಯರಾದ ಚಂದ್ರಶೇಖರ, ಅಹ್ಮದ್ ಕಬೀರ್ ಕಾಜೂರು ಮತ್ತು ಶಾಹುಲ್ ಹಮೀದ್, ಮಲವಂತಿಗೆ ಗ್ರಾ.ಪಂ ಸದಸ್ಯ ಕೆ.ಯು ಮುಹಮ್ಮದ್, ಪ್ರಮುಖರಾದ ಶಶಿಧರ ಗೌಡ ಬೆಡಿಗುತ್ತು, ಕಿಲ್ಲೂರು ಮಾಜಿ ಅಧ್ಯಕ್ಷ‌ ಎಂ.ಎ ಕಾಸಿಂ ಮಲ್ಲಿಗೆಮನೆ, ಪ್ರಮುಖರಾದ ಅಬ್ದುಲ್ ಬಶೀರ್ ನೆಕ್ಕರೆ ಮುಂಡಾಜೆ, ಬಶೀರ್ ಮಾಹಿನ್, ಸಿರಾಜುದ್ದೀನ್ ಸಖಾಫಿ ಪಿಚಲಾರು, ಅಬ್ಬೋನು ಮದ್ದಡ್ಕ, ಅಶ್ರಫ್ ಬಿ ನೆರಿಯ, ಸುಲೈಮಾನ್ ಚಾರ್ಮಾಡಿ, ಕರೀಂ ಹಾಜಿ ಲಾಯಿಲ, ಡಿ.ಡಿ‌ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಮುಹಮ್ಮದ್ ರಫಿ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್, ಸಾದಾತ್ ತಂಙಳ್,ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಾರ್ಮಾಡಿ ಹಸನಬ್ಬ, ಪಿಡಿಒ ಮೋಹನ್ ಬಂಗೇರ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಉರೂಸ್ ಸಮಿತಿ ಹಾಗೂ ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು ವಂದಿಸಿದರು. ಬಾಕ್ಸ್;ಸಂದಲ್ ಮೆರವಣಿಗೆ;ಉರೂಸ್ ಸಂಪ್ರದಾಯದಂತೆ ಕಿಲ್ಲೂರಿನಿಂದ ಬೃಹತ್‌ಸಂದಲ್ ಮೆರವಣಿಗೆ, ವಾಹನ ಜಾಥಾ ಆಗಮಿಸಿ ಅದನ್ನು ಕಾಜೂರುನಲ್ಲಿ ಸ್ವಾಗತಿಸಲಾಯಿತು. ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಧ್ವಜಾರೋಹಣ ನೆರವೇರಿಸಿದರು.

Related posts

ಜೈನ ಶ್ರಾವಕ, ಶ್ರಾವಕಿಯರಿಗೆ ರಾಜ್ಯ ಮಟ್ಟದ ಸ್ಪರ್ಧೆ

Suddi Udaya

ಕೊಕ್ಕಡ: ಹೊಸೊಕ್ಲುವಿನಲ್ಲಿ ಬೃಹತ್ ಗಾತ್ರದ ಶಂಖಪಾಲ ಹಾವು ಪತ್ತೆ

Suddi Udaya

ಚಾರ್ಮಾಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಂದ ಶ್ರಮದಾನ

Suddi Udaya

ಬಜೆಟ್ 2047 ರ ವಿಕಸಿತ ಭಾರತ ಸಾಧನೆಗೆ ಭದ್ರ ಬುನಾದಿ : ಪ್ರತಾಪ್ ಸಿಂಹ ನಾಯಕ್

Suddi Udaya

ಪುದುವೆಟ್ಟು ಗ್ರಾ.ಪಂ.ನ ಗ್ರಾಮ ಸಭೆ

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ವಿಧ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ

Suddi Udaya
error: Content is protected !!