23 C
ಪುತ್ತೂರು, ಬೆಳ್ತಂಗಡಿ
April 17, 2025
Uncategorized

ಧರ್ಮಸ್ಥಳ ಶಾಂತಿವನದಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ: ಕರ್ತವ್ಯ ನಿಷ್ಠೆಯೇ ದೇಶ ಸೇವೆ: ಕರ್ನಲ್ ಎಂ.ಜಿ ಜಯರಾಮ್

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆ ಶಾಂತಿವನದಲ್ಲಿ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು ನೆರವೇರಿಸಿದ ಕರ್ನಲ್ ಎಂ.ಜಿ ಜಯರಾಮ್ ರವರು ಮಾತನಾಡಿ, ದೇಶಸೇವೆ ಸೈನಿಕರಿಗಷ್ಟೇ ಸೀಮಿತವಾಗಬಾರದು, ಪ್ರತಿಯೊಂದು ವೃತ್ತಿಯನ್ನು ನಿಷ್ಠೆಯಿಂದ ಮಾಡಿದಲ್ಲಿ ಅದೂ ದೇಶ ಸೇವೆ ಎನಿಸಿಕೊಳ್ಳುತ್ತದೆ. ದೇಶದ ವಿವಿಧ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳಿಗಿಂತ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಉತ್ಕೃಷ್ಟ ಸಂಸ್ಥೆ ಗುಣಮಟ್ಟದ ಪರಿಪೂರ್ಣ ಚಿಕಿತ್ಸೆಯನ್ನು ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಅಮೆರಿಕಾದ ಖ್ಯಾತ ಶ್ವಾಸಕೋಶ ರೋಗದ ತಜ್ಞರು ಡಾ ಬಾಲಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಶಿವಪ್ರಸಾದ್ ಶೆಟ್ಟಿ, ಯೋಗ ಮತ್ತು ನೈತಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಶಶಿಕಾಂತ್ ಜೈನ್, ಆಡಳಿತ ಅಧಿಕಾರಿಗಳಾದ ಜಗನ್ನಾಥ, ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ. ಬಿಂದು, ಸಮಸ್ತ ವೈದ್ಯಕೀಯ ತಂಡ, ಪ್ರಬಂಧಕರಾದ ಸ್ವಸ್ತಿಕ್, ಸ್ನಾತಕೋತ್ತರ ವಿದ್ಯಾರ್ಥಿಗಳು, ಸ್ಥಾನಿಕ ವೈದ್ಯ ವಿದ್ಯಾರ್ಥಿಗಳು, ಆಸ್ಪತ್ರೆಯ ಸಾಧಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಡಾ. ಬಿಂದು ವಂದಿಸಿ, ಡಾ ಗೋವಿಂದನ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಡಿಕೆ ಶಿವಕುಮಾರ್‌ ಬಣ, ಇದೀಗ ಮತ್ತೆ ಬಹಿರಂಗವಾಗಿ ತಮ್ಮ ನಾಯಕರ ಪರ ಲಾಬಿ ಆರಂಭಿಸಿದೆ

Suddi Udaya

ಕೊಕ್ಕಡ:ಮನೆಯೊಂದರ ಅಂಗಳದಲ್ಲಿ ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕನೋರ್ವ ಕಾರಿನಡಿಗೆ ಬಿದ್ದು ಮೃತಪಟ್ಟ ಘಟನೆ

Suddi Udaya

ಬೆಳ್ತಂಗಡಿ ಎಸ್. ಡಿ .ಎಮ್ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Suddi Udaya

ಬೆಳಾಲು: ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಿವಿಧ ಸಮಿತಿಗಳ ವತಿಯಿಂದ ಸ್ವಚ್ಛತಾ ಕಾರ್ಯ

Suddi Udaya

ಭಾರೀ ಗಾಳಿ-ಮಳೆ: ನಾವೂರು ನಾಗಜೆ ಯಮನಾ ರವರ ಮನೆಗೆ ಬಿದ್ದ ಬೃಹತ್ ಗಾತ್ರದ ಮರ: ಅಪಾರ ಹಾನಿ

Suddi Udaya

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ನವದುರ್ಗ ಲೇಖನ ಯಜ್ಞ ಕುರಿತು ಮಾಹಿತಿ

Suddi Udaya
error: Content is protected !!