ವೇಣೂರು: ಇಲ್ಲಿನ ಪಡ್ಡಂದಡ್ಕ ಮುನವ್ವರುಲ್ ಇಸ್ಲಾಮ್ ಮದರಸದಲ್ಲಿ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮಸೀದಿಯ ಕಾರ್ಯದರ್ಶಿ ರಫೀಕ್ ಪಡ್ಡ ಧ್ವಜಾರೋಹಣ ಗೈದರು. ಧರ್ಮ ಗುರುಗಳಾದ ಝುಬೈರ್ ದಾರಿಮಿ ಅಝ್ಹರಿ, ಹೆಚ್. ಮುಹಮ್ಮದ್ ವೇಣೂರು ಸಂದೇಶ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಾಸಿರ್ ಚಮ್ಮ, ಪಿ.ಎಸ್. ಅಬ್ದುಲ್ ಸಲಾಂ, ಸಯ್ಯಿದ್ ಶರಫುದ್ದೀನ್ ತಙಲ್, ಸಾಬಿತ್ ಫೈಝಿ, ನಝೀರ್ ಹನೀಫಿ, ಮದರಸದ ವಿದ್ಯಾರ್ಥಿಗಳು ಸೇರಿ ಹಲವರು ಭಾಗವಹಿಸಿದ್ದರು.