ಚಾರ್ಮಾಡಿ: ಶ್ರೀ ಕೃಷ್ಣ ಕುಂಬಾರರ ಗೆಳೆಯರ ಬಳಗ (ರಿ) ಚಾರ್ಮಾಡಿ ವಲಯ ಇವರ ವತಿಯಿಂದ ಜ. 25ರಂದು ನಡೆದ ಸ್ವಜಾತಿ ಬಾಂಧವರ ಮಾಗಣೆ ಮಟ್ಟದ ಹೊನಲು ಬೆಳಕಿನ ಪುರುಷರ ಹಾಗೂ ಮಹಿಳೆಯರ (7 + I) ಮುಕ್ತ ಗ್ರಿಪ್ ಮಾದರಿಯ ಹಗ್ಗ ಜಗ್ಗಾಟ ಪಂದ್ಯಾಟ ಹಾಗೂ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಜನ್ ಶ್ರೀ ಕುಂಬಾರರ ಸಂಘ ವಿವೇಕಾನಂದ ನಗರ, ಗಾಂಧಿನಗರ ಕಕ್ಕೆಜಾಲು, ಪುತ್ರಬೈಲು, ಮೇಲಿನ ಕೊಪ್ಪ ಲಾಯಿಲದ ಸದಸ್ಯರು ಮೂರು ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನವನ್ನು ತನ್ನದಾಗಿಸಿ ಕೊಂಡಿದ್ದಾರೆ.