23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆ

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಜಯಭೇರಿ: ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

ಕೊಕ್ಕಡ: ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಜ.27ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ 12 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಾದ ಸಾಮಾನ್ಯ ಕ್ಷೇತ್ರದ ಪಿ. ಕುಶಾಲಪ್ಪ ಗೌಡ, ವಿಠಲ ಬಂಡಾರಿ, ಶ್ರೀನಾಥ ಬಿ., ಪದ್ಮನಾಭ ಕೆ., ಉದಯ ಎ., ಮಹಾಬಲ ಶೆಟ್ಟಿ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸುನಿಲ್, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ರವಿಚಂದ್ರ ಪಿ., ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಶ್ರೀಮತಿ ಪ್ರೇಮಾವತಿ, ಶ್ರೀಮತಿ ಅಶ್ವಿನಿ, ಪ. ಪಂಗಡ ಕ್ಷೇತ್ರದಿಂದ ವಿಶ್ವನಾಥ, ಪ. ಜಾತಿ ಕ್ಷೇತ್ರದಿಂದ ಮುತ್ತಪ್ಪ ಜಯ ಗಳಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸೋಲನ್ನು ಕಂಡಿದ್ದಾರೆ.

ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಎನ್.ಜೆ. ಗೋಪಾಲ್ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ನ್ಯಾಯಾಲಯದ ಆದೇಶದ ಬಳಿಕ ಘೋಷಣೆ: ಸಹಕಾರಿ ಸಂಘದ 2 ಮಹಾಸಭೆಗೆ ಗೈರು ಹಾಜರಾದ ಸಂಘದ ಸದಸ್ಯರಿಗೆ ಸಹಕಾರಿ ಸಂಘದ ನಿಯಮದಂತೆ ಸಂಘದ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಇಲ್ಲ. ಈ ಹಿನ್ನಲೆಯಲ್ಲಿ ಮತದಾನದ ಅವಕಾಶ ಕಳೆದುಕೊಂಡ ಸಂಘದ ಸದಸ್ಯರು ಬೆಂಗಳೂರು ಉಚ್ಚನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ಪಿಟಿಷನ್‌ನಂತ ನ್ಯಾಯಲಯ ಎಲ್ಲ ಸದಸ್ಯರಿಗೂ ಮತದಾನಕ್ಕೆ ಅನುಮತಿ ನೀಡಿ, ಮುಂದಿನ ಆದೇಶವನ್ನು ಕಾಯ್ದಿರಿಸಿದೆ. ನ್ಯಾಯಾಯಲದ ಆದೇಶದಂತೆ ಮತದಾನಕ್ಕೆ ಅನುಮತಿ ಪಡೆದಿರುವ ಸದಸ್ಯರು ಮತ ಚಲಾಯಿಸಿದ್ದು ಆ ಮತಗಳನ್ನು ಪ್ರತ್ಯೇಕವಾಗಿ ನಿರ್ವಹಿಸಿ, ಅಭ್ಯರ್ಥಿ, ಏಜಂಟರ ಸಮ್ಮುಖದಲ್ಲಿ ಎಣಿಕೆಯನ್ನು ಮಾಡಲಾಗಿದೆ. ಎಲ್ಲಾ ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಉಚ್ಚ ನ್ಯಾಯಾಲಯದ ಆದೇಶ ಬಂದ ನಂತರ ಚುನಾವಣಾಧಿಕಾರಿಗಳು ಘೋಷಣೆ ಮಾಡಲಿದ್ದಾರೆ.

Related posts

ಹಾಡು ಹಗಲೇ ಗರ್ಡಾಡಿಯಲ್ಲಿ ಮನೆಗೆ ನುಗ್ಗಿದ ಕಳ್ಳರು: ಚಿನ್ನಾಭರಣ ಸಹಿತ ನಗದು ಕಳವು

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ: ಶ್ರೀಉಮಾಮಹೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ: ಬ್ರಹ್ಮಕಲಶಾಭಿಷೇಕ

Suddi Udaya

ಜಾರಿಗೆಬೈಲು ಬದ್ರಿಯಾ ಹಿದಾಯತುಲ್ ಇಸ್ಲಾಂ ಮದರಸ ಸಮಿತಿ ಹಾಗೂ ಗಲ್ಫ್ ಸಮಿತಿ ನೇತೃತ್ವದಲ್ಲಿ; ಜ. 7 : ಪರಿಮ ಜಾರಿಗೆ ಬೈಲಿನಲ್ಲಿ ಏಕದಿನ ಮತ ಪ್ರಭಾಷಣ – ಸನ್ಮಾನ ಕಾರ್ಯಕ್ರಮ

Suddi Udaya

ಉಜಿರೆ: ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಪುತ್ತಿಗೆ ಮಠದ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳರವರ ಭೇಟಿ

Suddi Udaya

ಜ.16: ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ನಾರಾವಿ ಸಂತ ಅಂತೋನಿ ಪ.ಪೂ. ಕಾಲೇಜಿಗೆ ಶೇ.93 ಫಲಿತಾಂಶ

Suddi Udaya
error: Content is protected !!