23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ತರಬೇತಿ

ಬೆಳ್ತಂಗಡಿ: ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಮೊದಲ ಕಾರ್ಯಕ್ರಮವಾದ ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ತರಬೇತಿ ಕಾರ್ಯಕ್ರಮವನ್ನು ಲಾಯಿಲ ವಿಘ್ನೇಶ್ವರ ಕಲಾಮಂದಿರದಲ್ಲಿ ಜ.24ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಘಟಕದ ಪೂರ್ವ ಅಧ್ಯಕ್ಷರು, ರಮ್ಯ 1 ಗ್ರಾಂ ಗೋಲ್ಡ್ ಉಜಿರೆಯ ಇದರ ಮಾಲಕ ಜೆಸಿ ಪ್ರಸಾದ್ ಬಿ.ಎಸ್ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ತರಬೇತುದಾರರಾಗಿ ಜೆಸಿಐ ವಲಯ 15ರ ಪೂರ್ವ ವಲಯ ಉಪಾಧ್ಯಕ್ಷರು, ವಲಯ ತರಬೇತುದಾರರಾದ ಜೆಸಿ ಶಂಕರ್ ರಾವ್ ಸುಸ್ಥಿರ ಭವಿಷ್ಯಕ್ಕಾಗಿ ಯುವ ಜನತೆ ಎನ್ನುವ ವಿಷಯದ ಬಗ್ಗೆ ತರಬೇತಿಯನ್ನು ನೀಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಶ್ರೀ ಬಲಮುರಿ ಭಜನಾ ಮಂಡಳಿ, ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಲಾಯಿಲ, ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ಇದರ ಸದಸ್ಯರು ಹಾಗೂ ಬಜಕರು, ಜೇಸಿಐ ಬೆಳ್ತಂಗಡಿಯ ಸದಸ್ಯರು ಜೂನಿಯರ್ ಜೇಸಿ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷೆ ಜೆಸಿ ಆಶಾಲತಾ ಪ್ರಶಾಂತ್ ವಹಿಸಿ ಸ್ವಾಗತಿಸಿದರು. ಜೆಸಿ ವಾಣಿಯನ್ನು ಜೂನಿಯರ್ ಜೆಸಿ ಸದಸ್ಯರಾದ ಜೆಸಿ ತ್ರಿಷಾ ಉದ್ಘೋಷಿಸಿ, ತರಬೇತುದಾರರ ಪರಿಚಯಯನ್ನು ಜೂನಿಯರ್ ಜೆಸಿ ಸದಸ್ಯರಾದ ಜೆಜೆಸಿ ನೇವಿಲ್ ನವೀನ್ ಮೋರಸ್ ತಿಳಿಸಿದರು, ಘಟಕದ ಕಾರ್ಯದರ್ಶಿ ಜೆಸಿ ಶೈಲೇಶ್ ವಂದಿಸಿದರು.

Related posts

ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆ

Suddi Udaya

ಮಂಜೊಟ್ಟಿ: ಸ್ಟಾರ್ ಲೈನ್ ಆಂ.ಮಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ನಡ ನೆಲ್ಲಿಗುಡ್ಡೆ ಅನಾರೋಗ್ಯದಿಂದ ಬಳಲುತ್ತಿರುವ ಶೀನಪ್ಪ ಗೌಡ ಕುಟುಂಬದ ಜೊತೆಗೆ ಹುಟ್ಟುಹಬ್ಬ ಆಚರಿಸಿ ತಾಲೂಕಿಗೆ ಮಾದರಿಯಾದ ನಡ ಪ.ಪೂ. ಕಾಲೇಜು ವಿದ್ಯಾರ್ಥಿ: ಅಕ್ಕಿ, ದವಸಧಾನ್ಯ ವಿತರಣೆ

Suddi Udaya

ಬೆಳ್ತಂಗಡಿಯ ಪ್ರಭಾತ್ ಸ್ಟೋರ್ಸ್ ನ ಮಾಲಕ ಪ್ರಶಾಂತ್ ಭಟ್ ನಿಧನ

Suddi Udaya

ಕೊಕ್ಕಡ: ಮಿಯಾವಕಿ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ: ಹೊಸ್ತೋಟ ಶಾಲೆಗೆ ಕ್ರೀಡಾ ಉಪಕರಣಗಳ ಹಸ್ತಾಂತರ

Suddi Udaya
error: Content is protected !!