September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಲ್. ಸಿ. ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕಕ್ಯಪದವು: ಎಲ್‌. ಸಿ. ಆರ್. ವಿದ್ಯಾ ಸಂಸ್ಥೆ ವಿಶ್ವ ಯೋಗ ದಿನಾಚರಣೆ ” ಒಂದೇ ಭೂಮಿ ಒಂದೇ ಆರೋಗ್ಯ” ಎಂಬ ಘೋಷ ವಾಕ್ಯದೊಂದಿಗೆ ಸಂಸ್ಥೆಯಲ್ಲಿ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ’ಯನ್ನು ಜೂ.21ರಂದು ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೋ, ಸಂಯೋಜಕ ಯಶವಂತ್‌ ಜಿ.ನಾಯಕ್, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ದೈಹಿಕ ಶಿಕ್ಷಣ ಶಿಕ್ಷಕಿ ಹರಿಣಾಕ್ಷಿ ಜಿ ಕೆ ಪ್ರಾಸ್ತಾವಿಕ ನುಡಿಗಳೊಂದಿಗೆ “ಮಾಡಿದರೆ ಯೋಗ, ದೂರವಾಗುವುದು ರೋಗ” ಎಂಬ ಮಹತ್ವಪೂರ್ಣ ಮಾತಿನಂತೆ ಉತ್ತಮ ಆರೋಗ್ಯ, ಏಕಾಗ್ರತೆ ಹಾಗೂ ಸಮಚಿತ್ತಕ್ಕಾಗಿ ‘ಯೋಗ’ ಒಂದು ದಿವ್ಯೌಷಧ. ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿರಿ ಎಂದು ಕಿವಿಮಾತನ್ನು ಹೇಳುತ್ತ ವಿದ್ಯಾರ್ಥಿಗಳಿಗೆ ಯೋಗಾಸನದ ಅರಿವನ್ನು ಮೂಡಿಸಿದರು.

ತರಗತಿವಾರು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಯೋಗಗಳನ್ನು ಮಾಡಿಸಿದರು. ಯೋಗಾಭ್ಯಾಸದ ಮೂಲಕ ದೈಹಿಕ ಮತ್ತು ಮಾನಸಿಕ ಸದೃಢತೆಯ ಗಮನಾರ್ಹ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಸಂಸ್ಥೆಯ ಸಹ ಶಿಕ್ಷಕಿ ಸೌಮ್ಯ ಬಿ. ಆರ್. ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೋ, ಸಂಯೋಜಕ ಯಶವಂತ್‌ ಜಿ.ನಾಯಕ್, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಕು.ವಿಜಯ ಹಾಗೂ ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.


Related posts

ಮುಂಡೂರು : ಸಂಘದ ಹಣವನ್ನು ಕಟ್ಟಲು ಹೋದ ಮಹಿಳೆ ವಾಪಸ್ಸು ಮನೆಗೆ ಬಾರದೆ ನಾಪತ್ತೆ

Suddi Udaya

ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಸಂಸ್ಥೆ ನಚ್ಚಬೊಟ್ಟು ಇದರ ಸಮ್ಮೇಳನದ ಸಂದೇಶ ಜಾಥಾ

Suddi Udaya

ಅಂಡಿಂಜೆ: ನೆಲ್ಲಿಂಗೇರಿ ನಿವಾಸಿ ವಿಶ್ವನಾಥ ಭಂಡಾರಿ ನಿಧನ

Suddi Udaya

ಒಕ್ಕಲೆಬ್ಬಿಸಿದ ಕ್ರಮಕ್ಕೆ ಬೆಳ್ತಂಗಡಿಯ ಕರ್ನಾಟಕ ಸೀರೋ ಮಲಬಾರ್ ಕೆಥೋಲಿಕ್ ಅಸೋಸಿಯೇಷನ್ ನಿಂದ ಖಂಡನೆ

Suddi Udaya

ಪೆರಾಡಿ ಸಂಘದಲ್ಲಿ ಪಶು ಆಹಾರ ಸರಬರಾಜು ಅಭಿಯಾನ

Suddi Udaya

ಮಡಂತ್ಯಾರು: ಬಿ ಎಂ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಸಭೆ

Suddi Udaya
error: Content is protected !!