ಉಜಿರೆ: “ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ಅದ್ಭುತ ಸಾಧನೆ ಮಾಡಿರುವುದು ಸಂತಸ ತಂದಿದೆ. ಹಿಂದೆ ಈ ಚಿಕಿತ್ಸೆಗೆ 10-12 ತಾಸು ಅನಶ್ತೇಶಿಯದಲ್ಲಿರಿಸಬೇಕಿತ್ತು. ಇಲ್ಲಿ ಮೂರು ತಾಸು ಸಾಕಾಗಿದೆ. ಇಂತಹ ಪ್ರಯೋಗ ನಮ್ಮ ಆಸ್ಪತ್ರೆಯಲ್ಲಿ ಮಾಡಿರುವುದು ಅಭಿನಂದನೀಯ” ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಉಜಿರೆ ಎಸ್ ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ವಿಶ್ವದ ಮೊದಲ ಇಂಟ್ರಾ ಡ್ಯೂರಲ್ ಸ್ಟೈನಲ್ ಟ್ಯೂಮರ್ ತೆಗೆದು ಯಶಸ್ವಿ ಡ್ಯೂರಲ್ ದುರಸ್ತಿ ಶಸ್ತ್ರಚಿಕಿತ್ಸೆ ಮಾಡಿ ಜಾಗತಿಕ ಮೈಲಿಗಲ್ಲನ್ನು ಸೃಷ್ಟಿಸಿದ್ದು, ವೈದ್ಯಕೀಯ ಲೋಕದಲ್ಲಿ ಇದೊಂದು ವಿಶೇಷ ಸಾಧನೆಯಾಗಿರುವ ಹಿನ್ನೆಲೆ ಜ.26 ರಂದು ಆಸ್ಪತ್ರೆಯಲ್ಲಿ ವೈದ್ಯರನ್ನು ಶ್ಲಾಘಿಸಿ ಅವರು ಮಾತನಾಡಿದರು.
ಡಾ.ಹೇಮಾವತಿ ವೀ.ಹೆಗ್ಗಡೆ ಮಾತನಾಡಿ, “ಆಸ್ಪತ್ರೆ ಬೆಳವಣಿಗೆ ನೋಡಿ ಅದನ್ನು ಸ್ಥಾಪಿಸಿದವರಿಗೆ ಸಂತೋಷವಾಗುತ್ತದೆ. ಇದೊಂದು ಪವಾಡಸದೃಶ. ನ್ಯಾಚುರೋಪತಿಯಲ್ಲಿ ಅನೇಕ ರೋಗಗಳು ಪಂಚತತ್ವದಡಿ ಗುಣಮುಖವಾಗಿದ್ದಿದೆ. ಅದೇ ರೀತಿ ಎಸ್ ಡಿಎಂ ಆಸ್ಪತ್ರೆಯ ಈ ಸಾಧನೆಗೆ ವೈದ್ಯರನ್ನು ನಾನು ಅಭಿನಂದಿಸುತ್ತೇನೆ” ಎಂದರು.
ಖ್ಯಾತ ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಮಹೇಶ್ ಕೆ. ಹಾಗೂ
ಡಾ. ಶತಾನಂದ ಪ್ರಸಾದ್ ರಾವ್ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.
ಶಸ್ತ್ರಚಿಕಿತ್ಸೆ ನಡೆಸಿದ ತಂಡದ
ಅರೆವಳಿಕೆ ತಜ್ಞೆ ಡಾ.ಚೈತ್ರಾ, ಎಸ್ ಡಿಎಂ ಆಸ್ಪತ್ರೆ ಮೆಡಿಕಲ್ ಸೂಪರಿಡೆಂಟ್ ದೇವೇಂದ್ರ ಉಪಸ್ಥಿತರಿದ್ದರು.
ಆಸ್ಪತ್ರೆಯ ಎಂಡಿ ಎಂ.ಜನಾರ್ದನ್ ಸ್ವಾಗತಿಸಿದರು.ಸಿಬ್ಬಂದಿ ಚಿದಾನಂದ ಡಿ. ಕಾರ್ಯಕ್ರಮ ನಿರೂಪಿಸಿದರು.