ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್.ಎಸ್.ಎಫ್ ಇದರ ಬೆಳ್ತಂಗಡಿ ಡಿವಿಷನ್ ವಾರ್ಷಿಕ ಮಹಾಸಭೆಯು ಜ.23ರಂದು ವೇಣೂರಿನ ಪಡ್ಡಂದಡ್ಕದಲ್ಲಿ ನಡೆಯಿತು.
ಡಿವಿಷನ್ ಅಧ್ಯಕ್ಷ ಖಲಂದರ್ ಶಾಫಿ ಮದನಿ ಸಭಾಧ್ಯಕ್ಷತೆ ವಹಿಸಿದ್ದರು. ಮಹಾಸಭೆಯನ್ನು ಅಬ್ದುಲ್ ಜಲೀಲ್ ಮದನಿ ಉಸ್ತಾದರು ಉದ್ಘಾಟಿಸಿದರು.
ಸಯ್ಯದ್ ಶರಫುದ್ದೀನ್ ತಂಙಳ್ ಪಡ್ಡಂದಡ್ಕ ದುಆ ಆಶೀರ್ವಚನ ನೀಡಿದರು. ದ.ಕ ಈಸ್ಟ್ ಜಿಲ್ಲಾ ನಾಯಕ ಸ್ವಾದಿಕ್ ಮಾಸ್ಟರ್ ಸುಳ್ಯ ಭಾಗವಹಿಸಿದ್ದರು.
2025-26ನೇ ಸಾಲಿನ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇಸಾಕ್ ಅಳದಂಗಡಿ, ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಅಹ್ಸನಿ ಮಲೆಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಪಡ್ಡಂದಡ್ಕ, ಕೋಶಾಧಿಕಾರಿಯಾಗಿ ಹಂಝ ಕಕ್ಕಿಂಜೆ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಬೀನ್ ಉಜಿರೆ, ಕ್ಯೂಡಿ ಕಾರ್ಯದರ್ಶಿಯಾಗಿ ಶಾಕಿರ್ ಉಜಿರೆ, ದಆವಾ ಕಾರ್ಯದರ್ಶಿಯಾಗಿ ಬಾತಿಶ್ ಮುಈನಿ ನಾವೂರು, ಜೀಡಿ ಕಾರ್ಯದರ್ಶಿಯಾಗಿ ಫಯಾಜ್ ಗೇರುಕಟ್ಟೆ, ಮೀಡಿಯಾ ಕಾರ್ಯದರ್ಶಿಯಾಗಿ ಹಾಫಿಲ್ ಬಾಸಿತ್ ಹಿಮಮಿ ಸಖಾಫಿ ನಾವೂರು, ರೈಂಬೋ ಕಾರ್ಯದರ್ಶಿಯಾಗಿ ನೌಫಲ್ ಮರ್ಝೂಖಿ ಸಖಾಫಿ ಶಿರ್ಲಾಲ್ ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಿವಿಷನ್ ವ್ಯಾಪ್ತಿಯ 7 ಸೆಕ್ಟರ್‌ಗಳ ಕೌನ್ಸಿಲರ್‌ಗಳು ಭಾಗವಹಿಸಿದ್ದರು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ ಸ್ವಾಗತಿಸಿ ವರದಿ ಮಂಡಿಸಿದರು. ಕೋಶಾಧಿಕಾರಿ ಇಸಾಕ್ ಅಳದಂಗಡಿ ಲೆಕ್ಕಪತ್ರ ವಾಚಿಸಿದರು. ನೂತನ ಕಾರ್ಯದರ್ಶಿ ನಾಸಿರ್ ವಂದಿಸಿದರು.