ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಹಾಗೂ ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ಇವರ ಸಹಯೋಗದಲ್ಲಿ ಉಚಿತ ಮಹಿಳಾ ಆರೋಗ್ಯ ತಪಾಸಣೆ ಶಿಬಿರವು ಜ.26ರಂದು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ನಡೆಯಿತು.
ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್ ನ ಮುಖ್ಯ ಇನ್ಫರ್ಟಿಲಿಟಿ ಕನ್ಸಲ್ಟೆಂಟ್ ಡಾ| ಗೌರವ್ ಗುಜರಾತಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಮುರಳಿಕೃಷ್ಣ ಇರ್ವತ್ರಾಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ವಂದನಾ ಎಂ. ಇರ್ವತ್ರಾಯ, ಆಡಳಿತಾಧಿಕಾರಿ ಶ್ರೀಮತಿ ಜ್ಯೋತಿ ವಿ ಸ್ವರೂಪ್, ಬಿರ್ಲಾ ಫರ್ಟಿಲಿಟಿ ಮತ್ತು ಐವಿಎಫ್‌ನ ಸೆಂಟರ್ ಮ್ಯಾನೆಜರ್ ಅಭಿಲಾಶ್, ಸಿನಿಯರ್ ಕೌನ್ಸಿಲರ್ ಶ್ರೀಮತಿ ಪ್ರೇಕ್ಷಾ, ಮಾರ್ಕೆಟಿಂಗ್ ಹೆಡ್ ರಾಕೇಶ್ ರಾವ್, ಮಾರ್ಕೆಟಿಂಗ್ ನ ಶೈಲೇಶ್ ಕುಮಾರ್ ಮತ್ತು ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಾರ್ವಜನಿಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು.