23 C
ಪುತ್ತೂರು, ಬೆಳ್ತಂಗಡಿ
April 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಡಿರುದ್ಯಾವರ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ರತ್ನಾವತಿ ರವರ ಅಧ್ಯಕ್ಷತೆಯಲ್ಲಿ ಜ.27 ರಂದು ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಜರುಗಿತು.

ಮಾರ್ಗದರ್ಶಕ ಅಧಿಕಾರಿಯಾಗಿ ಸರಕಾರಿ ಪ್ರೌಢ ಶಾಲೆ ಕಕ್ಕಿಂಜೆಯ ಮುಖ್ಯೋಪಾಧ್ಯಾಯ ಶಂಭು ಶಂಕರ್ ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.

ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸಾವಿತ್ರಿ, ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್‌ ಸದಸ್ಯರಾದ ಅಶೋಕ್ ಕುಮಾರ್, ಶ್ರೀಮತಿ ಬೇಬಿ, ಸೂರಜ್ ಗೌಡ ವಳಂಬ್ರ, ರಾಜೇಶ್ ಗೌಡ, ಗುರುಪ್ರಸಾದ್, ಶ್ರೀಮತಿ ಲಾವಣ್ಯ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸದಸ್ಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಬನಪ್ಪ ಗೌಡ್ರ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಜನಾರ್ದನ ಗೌಡ ಅನುಪಾಲನ ವರದಿ ವಾಚಿಸಿದರು. ವಿತೇಶ್ ಕೋಟ್ಯಾನ್ ಜಮಾ ಖರ್ಚುಗಳ ವಿವರವನ್ನು ಮಂಡಿಸಿದರು.

Related posts

ಬೆಳ್ತಂಗಡಿಯ ನೂತನ ಬಸ್ ನಿಲ್ದಾಣ ಕಾಮಗಾರಿಗೆ ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ವೇಣೂರು ವಿದ್ಯಾನಗರ ಬಳಿ ಲೂಯಿಸ್ ರವರ ಮನೆಯ ಕಾಂಪೌಂಡ್ ಕುಸಿತ

Suddi Udaya

ಬೆಳ್ತಂಗಡಿ: ಕು. ಸೌಜನ್ಯ ಕೊಲೆ ಪ್ರಕರಣ: ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Suddi Udaya

ಕರ್ನಾಟಕ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಬಂದಾರುವಿನ ತೇಜಸ್ವಿನಿ ಪೂಜಾರಿ ರವರಿಗೆ ಎರಡು ಚಿನ್ನದ ಪದಕ

Suddi Udaya

ಬೆಳ್ತಂಗಡಿ ಲಯನ್ಸ್ ಝೋನ್ ಮಟ್ಟದ ಸೆಮಿನಾರ್

Suddi Udaya

ನೆರಿಯ ಗ್ರಾ.ಪಂ. ಅಧ್ಯಕ್ಷರಾಗಿ ವಸಂತಿ ಹಾಗೂ ಉಪಾಧ್ಯಕ್ಷರಾಗಿ ಸಜಿತಾ ಆಯ್ಕೆ

Suddi Udaya
error: Content is protected !!