ಧರ್ಮಸ್ಥಳ: “ಈ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡಾ ಘನತೆಯಿಂದ ತಲೆಎತ್ತಿ ನಡೆಯುವಂತಹ ಅವಕಾಶ ಕಲ್ಪಿಸಿಕೊಟ್ಟದ್ದು ಡಾ|| ಬಿ.ಆರ್. ಅಂಬೇಡ್ಕರ್‌ರವರು ರಚಿಸಿದ ಭವ್ಯ ಭಾರತದ ಸಂವಿಧಾನ” ಎಂದು ಉಜಿರೆ ಶ್ರೀ ಧ.ಮಂ. ಕಾಲೇಜಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ನಟರಾಜ್ ಹೆಚ್.ಕೆ. ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಧರ್ಮಸ್ಥಳ ವಲಯ ಘಟಕ ಅಶೋಕನಗರ ಇದರ ಆಶ್ರಯದಲ್ಲಿ ಜ.26ರಂದು ನಡೆದ ಗಣರಾಜ್ಯೋತ್ಸವ ಸಂಭ್ರಮಾಚರಣೆ 2025 ಇದರ ಅಂಗವಾಗಿ ‘ಭಾರತ ಸಂವಿಧಾನ ಮತ್ತು ಮಾನವ ಹಕ್ಕುಗಳು’ ಎಂಬ ಉಪನ್ಯಾಸ-ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಆದಿದ್ರಾವಿಡ ಸಮಾಜ ಸೇವಾ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಕೊಕ್ಕಡ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ವಲಯ ಘಟಕದ ಅಧ್ಯಕ್ಷ ಡಿ. ಗಣೇಶ್, ನಿಕಟಪೂರ್ವ ಅಧ್ಯಕ್ಷ ಸುರೇಶ್, ಗ್ರಾ.ಪಂ. ಸದಸ್ಯೆ ಶ್ರೀಮತಿ ಸುನೀತಾ, ಅಶೋಕನಗರದ ಕರಿಯ ಗುರಿಕಾರ, ಸದಾಶಿವ ಗುರಿಕಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತೀರ್ಣರಾದ ಅಶೋಕನಗರದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಸಂಘಟನೆಗೆ ಸೇರ್ಪಡೆಗೊಂಡ ನೂತನ ಸದ್ಯರನ್ನು ಗುಲಾಬಿ ಹೂ ನೀಡಿ ಸ್ವಾಗತಿಸಲಾಯಿತು.

ಶ್ರೀಮತಿ ಸುಜಾತ ಬಂದು ಬಳಗದವರು ಕ್ರಾಂತಿ ಗೀತೆ ಹಾಡಿದರು. ಶ್ರೀಮತಿ ಸುಪ್ರಿತಾರವರ ಭೀಮಾ ಗೀತೆ ಹಾಡಿದರು. ಸುಜಾತ ಸ್ವಾಗತಿಸಿ, ಶಶಿಕಲಾ ಧನ್ಯವಾದವಿತ್ತರು. ಶೇಖರ್ ಧರ್ಮಸ್ಥಳ ಹಾಗೂ ಸುನೀತಾ ಕಾರ್ಯಕ್ರಮ ನಿರೂಪಿಸಿದರು.