37.2 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ “ಕೊಳಂಬೆ” ಕಿರುಚಿತ್ರ ನಿರ್ಮಾಣ: ವಿಕೆ ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ 2025, ‘ಕೊಳಂಬೆ’ ಬೆಸ್ಟ್ ಕಿರುಚಿತ್ರ ಡಬಲ್ ಪ್ರಶಸ್ತಿ,ಅನೀಶ್ ಅಮೀನ್ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

ಬೆಳ್ತಂಗಡಿ: ಬೆಂಗಳೂರಿನ ವಿಕೆ ಸ್ಟುಡಿಯೋಸ್ ವತಿಯಿಂದ ಆಯೋಜನೆಗೊಂಡ ವಿಕೆ ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ 2025ರ ಬೆಸ್ಟ್ ಕಿರು ಚಿತ್ರ ಪ್ರಶಸ್ತಿಗೆ “ಕೊಳಂಬೆ” ಬದುಕು ಕಟ್ಟಿದ ಕಥೆ ಎಂಬ ಕಿರುಚಿತ್ರ ಭಾಜನವಾಗಿದೆ. ಜೊತೆಗೆ ಉತ್ತಮ ನಿರ್ದೇಶಕ ಪ್ರಶಸ್ತಿಗೆ ಕೊಳಂಬೆ ಕಿರು ಚಿತ್ರವನ್ನು ನಿರ್ದೇಶಿಸಿದ ಅನೀಶ್ ವೇಣೂರು ಅವರ ಪಾಲಾಗಿದೆ. ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ,ಉದ್ಯಮಿ ಮೋಹನ್ ಕುಮಾರ್ ನೇತೃತ್ವದಲ್ಲಿ ನಿರ್ಮಾಣಗೊಂಡ ಕೊಳಂಬೆ ಕಿರುಚಿತ್ರಕ್ಕೆ ಎರೆಡೆರಡು ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಳಂಬೆ ಚಿತ್ರ ತಂಡ ಈ ಪ್ರಶಸ್ತಿಯನ್ನು ಸ್ವೀಕರಿಸಿದೆ.

ಬೆಳ್ತಂಗಡಿಯ ಚಾರ್ಮಾಡಿ ಸಮೀಪದ ಕೊಳಂಬೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದ ಕುರಿತಾದ ದುರಂತವನ್ನು ನೆನಪಿಸುವ ಮತ್ತು ಅಲ್ಲಿಯ ಜನತೆ ಮತ್ತೆ ಹೇಗೆ ಬದುಕು ಕಟ್ಟಿಕೊಂಡರು ಎಂಬುವುದರ ಕುರಿತಾದ ಕಿರುಚಿತ್ರ ಇದಾಗಿದೆ.

Related posts

ಪಾರೆಂಕಿ ಶ್ರೀ ರಾಮನಗರ ಹಾರಬೆಯಲ್ಲಿ ದೈವಗಳ ವಾರ್ಷಿಕ ನೇಮೋತ್ಸವ

Suddi Udaya

5, 8, 9 ಮತ್ತು 11ನೇ ತರಗತಿಗಳ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ ಗಣಪತಿ

Suddi Udaya

ಕೊಕ್ರಾಡಿ: ದೇವೆಂದ್ರ ಹೆಗ್ಡೆಯವರ ಮಾತೃಶ್ರೀ ಕೊಡಂಗೆಗುತ್ತು ನೀಲಮ್ಮ ಹೆಗ್ಡೆ ನಿಧನ

Suddi Udaya

ಇಳಂತಿಲ: ಮೂರು ದಿನದ ಹಸುಗೂಸಿನೊಂದಿಗೆ ಬಂದು ಮತ ಚಲಾಯಿಸಿದ ಬಾಣಂತಿ

Suddi Udaya
error: Content is protected !!