23 C
ಪುತ್ತೂರು, ಬೆಳ್ತಂಗಡಿ
April 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ಭಾಷಣ ಸ್ಪರ್ಧೆ

ಬೆಳ್ತಂಗಡಿ : ಜನವರಿ 26 ರಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಪರಿಣಾಮಕಾರಿ ಭಾಷಣ ಸ್ಪರ್ಧೆಯನ್ನು ಜೇಸಿ ಭವನ, ಬೆಳ್ತಂಗಡಿ ಇಲ್ಲಿ ನಡೆಸಲಾಯಿತು.

ತಾಲೂಕಿನ ವಿವಿಧ ಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ದಾರ್ಶನಿಕ ವೇದಾಂತಿ ಸ್ವಾಮಿ ವಿವೇಕಾನಂದ ಎಂಬ ವಿಷಯದಲ್ಲಿ ಭಾಷಣ ಮಂಡಿಸಿದರು.
ಪ್ರೌಢ ಶಾಲಾ ವಿಭಾಗದಲ್ಲಿ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ವಿಧ್ಯಾರ್ಥಿನಿ ಕು. ಧನುಶ್ರೀ ಪ್ರಥಮ ಹಾಗೂ ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ ಇಲ್ಲಿನ ಕು. ರಮ್ಯಶ್ರೀ ದ್ವಿತೀಯ ಸ್ಥಾನ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಧರ್ಮಸ್ಥಳ ಇಲ್ಲಿನ ವಿಧ್ಯಾರ್ಥಿನಿ ಕು. ಜಿಯ ಜೈನ್ ತೃತೀಯ ಸ್ಥಾನ ಪಡೆದರು.

ಪದವಿ ಪೂರ್ವ ವಿಭಾಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು ಇಲ್ಲಿನ ವಿಧ್ಯಾರ್ಥಿನಿ ನಿರೀಕ್ಷ ಪೂಜಾರಿ ಪ್ರಥಮ ಸ್ಥಾನ ಪಡೆದರೆ ಗುರುದೇವ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿ ದೀಪಕ್ ದ್ವಿತೀಯ ಸ್ಥಾನ ಪಡೆದರು.

ಪದವಿ ವಿಭಾಗದಲ್ಲಿ ಧರ್ಮಸ್ಥಳ ಪದವಿ ಕಾಲೇಜಿನ ವಿಧ್ಯಾರ್ಥಿ ಕು. ನೆವಿಲ್ ನವೀನ್ ಮೊರಾಸ್ ಪ್ರಥಮ ಸ್ಥಾನ ಹಾಗೂ ಅದೇ ಕಾಲೇಜಿನ ಕು. ವೇಣೂ ದ್ವಿತೀಯ ಪಡೆದಿರುತ್ತಾರೆ.


ಕಾರ್ಯಕ್ರಮವನ್ನು ಸಂಯೋಜಕರಾದ ಜೇಸಿ ಪೃಥ್ವಿರಾಜ್ ಜೈನ್ ಅಂಡಿಂಜೆ ನಿರ್ವಹಿಸಿ ಸಮರೋಪ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರನ್ನು ಘೋಷಿಸಿದರು.

ಉಪನ್ಯಾಸಕರಾದ ಜೇಸಿ ದಿನೇಶ್ ಮತ್ತು ಉಪನ್ಯಾಸಕ ಹಾಗೂ ಪತ್ರಿಕಾ ವರದಿಗಾರ ಜೇಸಿ ಗಣೇಶ್ ಬಿ. ಶಿರ್ಲಾಲು ಇವರು ತೀರ್ಪುಗಾರರಾಗಿ ಆಗಮಿಸಿದ್ದರು. ಭಾಗವಹಿಸಿದ ಎಲ್ಲಾ ಸ್ಪರ್ಧಿ ಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಜೇಸಿ ಆಶಾಲತಾ ಪ್ರಶಾಂತ್ ವಹಿಸಿ ಕಾರ್ಯಕ್ರಮದ ಧ್ಯೇಯೊದ್ದೇಶ ಬಗ್ಗೆ ಮಾಹಿತಿ ನೀಡಿ ಸರ್ವರಿಗೂ ಸ್ವಾಗತ ಕೋರಿದರು. ವಲಯ ಉಪಾಧ್ಯಕ್ಷ ಜೇಸಿ ರಂಜಿತ್ ಎಚ್ ಡಿ. ಜೇಸಿಐ ಬೆಳ್ತಂಗಡಿಯ ಸದಸ್ಯರು, ಜೂನಿಯರ್ ಜೇಸಿ ವಿಭಾಗದ ಸದಸ್ಯರು ವಿದ್ಯಾರ್ಥಿಗಳ ಪೋಷಕರು ಶಿಕ್ಷಕರು ಉಪಸ್ಥಿತರಿದ್ದರು. ಜೇಸಿ ಪ್ರಶಾಂತ ಲಾೖಲ ಇವರ ವೇದಿಕೆ ಆಹ್ವಾನದೊಂದಿಗೆ ಘಟಕದ ಕಾರ್ಯದರ್ಶಿ ಜೇಸಿ ಶೈಲೇಶ್ ಕೆ ಧನ್ಯವಾದವನ್ನು ಸಲ್ಲಿಸಿದರು.

Related posts

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿಯ ಪದಪ್ರದಾನ ಕಾರ್ಯಕ್ರಮ

Suddi Udaya

ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ

Suddi Udaya

ಗೆಜ್ಜೆಗಿರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಚ್ಚಿನ ಗ್ರಾ.ಪಂ. ನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಮೊಟಾರ್ ರಿವೈಂಡಿಂಗ್ ಮತ್ತು ಮೆನ್ಸ್ ಪಾರ್ಲರ್ ಮೆನೇಜ್‌ಮೆಂಟ್ ತರಬೇತಿಗಳ ಸಮಾರೋಪ ಸಮಾರಂಭ

Suddi Udaya

ವಾಣಿ ಶಿಕ್ಷಣ ಸಂಸ್ಥೆಗಳ ಬಸ್ ಚಾಲಕ ಶಶಿಧರ ಗೌಡ ಪಣಿಕ್ಕಲ್ ಹೃದಯಾಘಾತದಿಂದ ನಿಧನ

Suddi Udaya
error: Content is protected !!