
ಧರ್ಮಸ್ಥಳ. ಶಾಂತಿವನ ಟ್ರಸ್ಟ್ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಜ್ಞಾನ ದರ್ಶಿನಿ ಪುಸ್ತಕವನ್ನಾಧರಿಸಿದ ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳ ಇಲ್ಲಿಯ ವಿದ್ಯಾರ್ಥಿ ಅಮಿತ್ ಪ್ರಥಮ ಸ್ಥಾನ ಪಡೆದಿರುತ್ತಾನೆ.
ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದಿರುವ ಈ ಸ್ಪರ್ಧೆಯ ಬಹುಮಾನವನ್ನು ಡಾ. ಡಿ ವೀರೇಂದ್ರ ಹೆಗಡೆಯವರು ನೀಡಿ ಅಭಿನಂದಿಸಿರುತ್ತಾರೆ. ಶಿಕ್ಷಕಿ ಶ್ರೀಮತಿ ಉಷಾ ಕುಮಾರಿ ಇವರು ತರಬೇತಿ ನೀಡಿರುತ್ತಾರೆ.